ಕುಂಬಳೆ: ವಿದ್ಯುತ್ ಆಘಾತಕ್ಕೊಳಗಾಗಿ ಇತ್ತೀಚೆಗೆ ದಾರುಣ ಸಾವನ್ನಪ್ಪಿದ ಸೀತಾಂಗೋಳಿಯ ಕೆಎಸ್‍ಇಬಿ ಲೈನ್‍ಮ್ಯಾನ್, ವಿದ್ಯಾನಗರ ಉದಯಗಿರಿ ನಿವಾಸಿ ಎನ್.ಬಿ. ಪ್ರದೀಪ್ ಅವರ ಅಕಾಲಿಕ ಮರಣಕ್ಕೆ ಸೀತಾಂಗೋಳಿ ಸಂತೋಷ್ ಆಟ್ರ್ಸ್ ಎಂಡ್ ಸ್ಪೋಟ್ರ್ಸ್ ಕ್ಲಬ್ ಗಾಢ ಸಂತಾಪ ವ್ಯಕ್ತಪಡಿಸಿದೆ.
ಸೀತಾಂಗೋಳಿ ಪ್ರದೇಶದಲ್ಲಿ ಎಲ್ಲರ ಜೊತೆಗೆ ಅತ್ಯಂತ ಆತ್ಮೀಯವಾಗಿ ವರ್ತಿಸುತ್ತಿದ್ದ ಅವರು ನಾಡಿನ ಜನರ ಯಾವುದೇ ಅಗತ್ಯಗಳಿಗೆ ಸ್ಪಂದಿಸುತ್ತಿದ್ದರು. ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಅವರು ಸಂತೋಷ್ ಕ್ಲಬ್ಬಿನ ಸೇವಾಕಾರ್ಯಗಳಿಗೆ ನೆರವಾಗುತ್ತಿದ್ದರು. ಅವರ ನಿಧನವು ಸೀತಾಂಗೋಳಿ ಪ್ರದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ಅಧ್ಯಕ್ಷರಾಗಿರುವ ನ್ಯಾಯವಾದಿ ಎಂ.ಎಸ್. ಥೋಮಸ್ ಡಿ"ಸೋಜಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.