ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ನಿಷೇಧಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಸಂಪರ್ಕ ನಿರ್ಬಂಧ ಮುಂದುವರಿಯಲಿದ್ದು, ಕರ್ನಾಟಕಕ್ಕೆ ಉದ್ಯೋಗಾರ್ಥ ಪ್ರತಿದಿನ ಒಂದೇ ವಿಳಾಸಕ್ಕೆ ತೆರಳುವ ಮಂದಿಗೆ ಮಾತ್ರ ಪಾಸ್ ಮಂಜೂರು ಮಾಡಲಾಗುವುದು. ಈ ರೀತಿ ತೆರಳಿ, ಮರಳುವವರು 7 ದಿನಗಳ ನಂತರ ಆಂಟಿಜೆನ್ ಟೆಸ್ಟ್ ಗೆ ಒಳಗಾಗಬೇಕು. ಇದಕ್ಕಿರುವ ಸೌಲಭ್ಯ ತಲಪ್ಪಾಡಿಯಲ್ಲಿ ಸಜ್ಜುಗೊಳಿಸಲಾಗಿದೆ. ಪ್ರತಿದಿನ ಈ ರೀತಿ ತೆರಳುವವರು ಕಡ್ಡಾಯವಾಗಿ ಕೋವಿಡ್ 19 ಜಾಗ್ರತಾ ವೆಬ್ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕು. ಉದ್ಯೋಗ ಮಾಲೀನರ ಹೆಸರು, ವಿಳಾಸ, ದೂರವಾಣಿ ನಂಬ್ರ, ದೃಡೀಕರಣ ಪತ್ರ ಪಾಸ್ ಗೆ ಅರ್ಜಿ ಸಲ್ಲಿಸುವ ವೇಳೆ ಹಾಜರುಪಡಿಸಬೇಕು. ಅರ್ಜಿಯಲ್ಲಿ ಟು ಎಂಬ ಕಾಲಂನಲ್ಲಿ ಸ್ವಂತ ವಿಳಾಸ, ಫ್ರಂ ಎಂಬ ಕಾಲಂನಲ್ಲಿ ಉದ್ಯೋಗ ನಡೆಸುವ ಸಂಸ್ಥೆಯ ವಿಳಾಸ ನಮೂದಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.