ಬೆಂಗಳೂರು: ನೆಲಮಂಗಲದ ದೇವಾಂಗ ಸಮುದಾಯದ ವಸ್ತ್ರ ಭಾರತ ರಾಷ್ಟ್ರೀಯ ಚಿಂತನಾ ಸಂಸ್ಥೆಯವತಿಯಿಂದ ರಾಷ್ಟ್ರಪ್ರೇಮ ಮತ್ತು ರಾಷ್ಟ್ರ ಧ್ವಜದ ಮಹತ್ವವನ್ನು ಸಾರುವ ಉದ್ದೇಶದಿಂದ ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ಬೃಹತ್ ರಾಷ್ಟ್ರಧ್ವಜವನ್ನು ಅರ್ಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಇದರ ಪೂರ್ವಭಾವಿಯಾಗಿ 60 ಅಡಿಗಳ ಅಗಲ ಮತ್ತು 90 ಅಡಿಗಳ ಉದ್ದವಿರುವ ರಾಷ್ಟ್ರಧ್ವಜವನ್ನು ಸಿದ್ಧಪಡಿಸಲಾಗುತ್ತಿದೆ. ವಿಜಯನಗರದ ಮಾರುತಿ ಮೆಡಿಕಲ್ಸïನ ಗೋ ಸೇವಕ ಮಹೇಂದ್ರ ಮುನೋತ್ ಅವರು ಚಾಲನೆ ನೀಡಿದರು.