ಖ್ಯಾ ತ ಹಿನ್ನಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೋನಾ ಮಹಾಮಾರಿಗೆ ತುತ್ತಾಗಿದ್ದಾರೆ.
ಕೊರೋನಾ ಮಹಾಮಾರಿಗೆ ತುತ್ತಾಗಿರುವ ಕುರಿತು ಬಾಲಸುಬ್ರಹ್ಮಣ್ಯಂ ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ. ಇನ್ನು ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳಿಂದ ಹೆಚ್ಚು ಸುಸ್ತಾಗುತ್ತಿತ್ತು. ಜೊತೆಗೆ ನೆಗಡಿ ಮತ್ತು ಜ್ವರ ಕೂಡ ಇತ್ತು. ಹೀಗಾಗಿ ಕೋವಿಡ್ ಪರೀಕ್ಷೆಗೆ ಒಳಗಾದೆ. ಇದೀಗ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ.
ದೇಹದಲ್ಲಿ ಅಲ್ಪಪ್ರಮಾಣದ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ವೈದ್ಯರು ಮನೆಯಲ್ಲೇ ಇದ್ದು ಕೆಲ ಔಷಧಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಆದರೆ ನನ್ನ ಕುಟುಂಬದ ಮೇಲಿನ ಕಾಳಜಿಯಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳಿದ್ದಾರೆ.