ವಾಟ್ಸಪ್ ನ ಸ್ಪರ್ಧಿ ಟೆಲಿಗ್ರಾಮ್ ಮೆಸೇಜಿಂಗ್ ಆಪ್ ವಿಡಿಯೋ ಕಾಲ್ ಸೌಲಭ್ಯಕ್ಕೆ ಹೊಸದಾಗಿ ಚಾಲನೆ ನೀಡಿದೆ.
ಡೆಸ್ಕ್ ಟಾಪ್ ಹಾಗೂ ಮೊಬೈಲ್ ಗಳಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದ್ದು, ಟೆಲಿಗ್ರಾಮ್ ಆಪ್ ನ 7.0 ಆವೃತ್ತಿಯಲ್ಲಿ ಇದು ಗ್ರಾಹಕರಿಗೆ ಲಭ್ಯವಾಗಲಿದೆ. ಕಾಂಟಾಕ್ಟ್ ಪ್ರೊಫೈಲ್ ಪೇಜ್ ನಿಂದ ವಿಡಿಯೋ, ವಾಯ್ಸ್ ಕಾಲ್ ಮೋಡ್ ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ವಿಡಿಯೋ ಕರೆಯ ನಡುವೆಯೇ ಮಲ್ಟಿ ಟಾಸ್ಕ್ ಗೂ ಅವಕಾಶ ನೀಡಲಾಗಿದೆ. ಆನಿಮೇಟೆಡ್ ಎಮೋಜಿಗಳನ್ನೂ ಟೆಲಿಗ್ರಾಮ್ ಹೊಸದಾಗಿ ಪರಿಚಯಿಸಿದೆ. ಟೆಲಿಗ್ರಾಮ್ ಇತ್ತೀಚೆಗಷ್ಟೇ ಪ್ರೊಫೈಲ್ ವಿಡಿಯೋ ಹಾಕುವ, 2 ಜಿಬಿಯಷ್ಟು ಸಾಂಗ್ರಹವುಳ್ಳ ಅಂಶಗಳನ್ನು ಹಂಚಿಕೊಳ್ಳುವ ಸೌಲಭ್ಯಗಳನ್ನು ಕಲ್ಪಿಸಿತ್ತು.