ವಿಶ್ವಸಂಸ್ಥೆ: ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಏರಿಕೆ ಗಮನಿಸಿದರೆ ಅತಿ ಹೆಚ್ಚು ಜನಸಂಖ್ಯೆಯಿರುವ ವಿಶೇಷವಾಗಿ ಏಷಿಯಾ ದೇಶಗಳಲ್ಲಿ ಸಾಂಕ್ರಮಿಕದ ಹೋರಾಟ ದೀರ್ಘಕಾಲಿಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಅಭಿಪ್ರಾಯಪಟ್ಟಿದೆ.
ಆರು ತಿಂಗಳ ಹಿಂದೆ ಡಬ್ಲ್ಯುಎಚ್‍ಒ ಕೊರೋನಾ ವೈರಸ್ ಸಾಂಕ್ರಮಿಕವನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅಂದಿನಿಂದ ಇಂದಿನವರೆಗೆ ವಿಶ್ವದಲ್ಲಿ 6.80 ಲಕ್ಷ ಜನರು ಮೃತಪಟ್ಟಿದ್ದು, 17.5 ಮಿಲಿಯನ್ ಜನರಿಗೆ ಸೋಂಕು ತಗುಲಿದೆ.