ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ನಡೆಸಲಾದ ಮೊಬೈಲ್ ಕಿರುಚಿತ್ರ ಸ್ಪರ್ಧೆಯಲ್ಲಿ ಚೀಮೇನಿ ನಿವಾಸಿ ಸಜಿತ್ ಕೆ. ಅವರು ನಿರ್ಮಿಸಿರುವ "ಕರುದಲ್(ಜಾಗ್ರತೆ)" ಕಿರುಚಿತ್ರ ಪ್ರಥಮ ಬಹುಮಾನ ಗಳಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾಎ.ವಿ.ರಾಮದಾಸ್ ತಿಳಿಸಿದರು.
ಜಿಲ್ಲಾ ಮೆಡಿಕಲ್ ಆಫೀಸ್(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ ಗಳ ನೇತೃತ್ವದಲ್ಲಿ ಆರೋಗ್ಯ ಜಾಗೃತಿ-ಅಂಟುರೋಗ ಪ್ರತಿರೋಧ ಜನಜಾಗೃತಿ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿದ "ಕ್ಲಿಕ್ ಫಾರ್ ಹೆಲ್ತ್" ಅಭಿಯಾನ ಅಂಗವಾಗಿ ಈ ಸ್ಪರ್ಧೆ ನಡೆಸಲಾಗಿತ್ತು.
ಒಟ್ಟು 11 ಕಿರು ಚಿತ್ರಗಳು ಸ್ಪರ್ಧೆ ಅಂಗವಾಗಿ ಲಭಿಸಿದ್ದುವು. ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರಿಗೂ ಜಿಲ್ಲಾ ವೈದ್ಯಾಧಿಕಾರಿ ಅಭಿನಂದನೆ ತಿಳಿಸಿದರು.