ಇಡುಕ್ಕಿ: ಇಡುಕ್ಕಿ ಉಡುಂಬಚ್ಚೋಲ ತಾಲೂಕಿನ ಕಟ್ಟಪ್ಪನ ಭೂ ರಿಜಿಸ್ಟ್ರಾರ್ ಕಚೇರಿಗೆ ಬಂದ ಕ್ಯಾನ್ಸರ್ ರೋಗಿಯನ್ನು ಮೂರನೇ ಮಹಡಿಯಲ್ಲಿರುವ ಮುಂದಿನ ಸೀಟಿಗೆ ಕರೆತರಬೇಕು ಎಂದು ಒತ್ತಾಯಿಸಿದ್ದಕ್ಕಾಗಿ ಸಬ್ ರಿಜಿಸ್ಟ್ರಾರ್ ಅವರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ.
ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಮೇಲೆ ಕ್ರೂರವಾಗಿ ವರ್ತಿಸಿದ ಬಗ್ಗೆ ಸಚಿವ ಜಿ.ಸುಧಾಕರನ್ ಅವರು ನಡೆಸಿದ ಪ್ರಾಥಮಿಕ ವಿಚಾರಣೆಯ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್ ಜಿ.ಜಯಲಕ್ಷ್ಮಿ ಅವರನ್ನು ಅಮಾನತು ಮಾಡಲಾಗಿದೆ. ಸಾವಿನ ದವಡೆಯಲ್ಲಿರುವ ಕ್ಯಾನ್ಸರ್ ರೋಗಿಯ ಬಗ್ಗೆ ಯಾವುದೇ ಕರುಣೆ ತೋರಿಸದೆ ಅಮಾನವೀಯತೆಯಿಂದ ವರ್ತಿಸಿದ ಸಬ್ ರಿಜಿಸ್ಟಾರ್ ಅವರನ್ನು ತನಿಖೆಗೊಳಪಡಿಸಲಾಗುವುದು ಮತ್ತು ಸೇವೆಯಿಂದ ಸೇವೆಯಿಂದ ಅಮಾನತುಗೈಯ್ಯಕಾಗುವುದೆಂದು ತಿಳಿದುಬಂದಿದ್ದು ಇಲಾಖೆಯ ಜಂಟಿ ಕಾರ್ಯದರ್ಶಿಗೆ ತನಿಖೆ ಹಾಗೂ ವರದಿ ನೀಡಲು ನಿರ್ದೇಶಿಸಲಾಗಿದೆ ಎಂದು ಸಚಿವ ಜಿ.ಸುಧಾಕರನ್ ಸ್ಪಷ್ಟಪಡಿಸಿದ್ದಾರೆ.
ಕಳಮಶೇರಿ ಪಂಚಾಯತ್ ಕಚೇರಿಯ ಚಾಲಕ ಮತ್ತು ಕ್ಯಾನ್ಸರ್ ರೋಗಿಯಾಗಿದ್ದ ಸುನೀಶ್ ಅವರ ಮೇಲೆ ಉಪ ನೋಂದಣಾಧಿಕಾರಿ ಜೀಸೆಫ್ ಈ ರೀತಿಯಿಂದ ಅಮಾನತುಗೊಂಡವರು.
ಸಪ್ರಸ್ತುತ ಸುನೀಶ್ ನಿಧನರಾದ್ದು ಸುನೀಶ್ ಮೇಲೆ ಸಬ್ ರಿಜಿಸ್ಟ್ರಾರ್ ತೋರಿಸಿದ ದುರಹಂಕಾರ ವರ್ತನೆಗೆ ಕೊನೆಗೂ ಶಿಕ್ಷೆಯಾಯಿತು. ಜೂನ್ 6 ರಂದು ಸುನೀಶ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ಯಲಾಗಿತ್ತು. ು
ಅನಾರೋಗ್ಯ ಪೀಡಿತ ಸುನೀಶ್‍ನನ್ನು ತನ್ನ ಮೇಜಿನ ಮುಂದೆ ಕರೆತಂದರೆ ಮಾತ್ರ ನೋಂದಣಿ ಪ್ರಕ್ರಿಯೆಯನ್ನು ಕೈಗೊಳ್ಳಬಹುದು ಎಂದು ಸಬ್ ರಿಜಿಸ್ಟ್ರಾರ್ ಹೇಳಿದ್ದರು. ಆದರೆ ಜೊತೆಗಿದ್ದವರು ಸುನೀಶ್ ಅವರ ಸಂಕಷ್ಟದ ಬಗ್ಗೆ ಪರಿಪರಿಯಾಗಿ ತಿಳಿಸಿದರೂ ತನ್ನ ನಿಲುವನ್ನು ಬದಲಾಯಿಸದ ನೋಂದಣಾಧಿಕಾರಿಯ ಅಮಾನವೀಯತೆಯ ಕಾರಣ ಬಳಿಕ ಸುನೀಶ್ ಅವರನ್ನು ಸಬ್ ರಿಸ್ಟಾರ್ ಅಧಿಕಾರಿ ಇರುವ ಕಟ್ಟಡದ ಮೂರನೇ ಮಹಡಿಗೆ ಕರೆದೊಯ್ಯಲಾಗಿತ್ತು. ಈ ಘಟನೆ ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಗಮನಕ್ಕೆ ಬಂದಿದೆ ಸಚಿವ ಜಿ.ಸುಧಾಕರನ್ ತಿಳಿಸಿದರು. ಬಳಿಕ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿರುವರು.