ಬೆಂಗಳೂರು : ಅಡಕೆ ಬೆಳಗಾರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಅಡಿಕೆ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದ್ದು, ಈ ಹಿಂದೆ ಕೆಜಿಗೆ 200 ರೂ. ನಿಂದ 250 ರೂ.ಗೆ ಖರೀದಿಸುತ್ತಿದ್ದ ಅಡಿಕೆಗೆ ಈಗ 400 ರೂ. ಲಭಿಸುತ್ತಿದೆ. ಕ್ಯಾಂಪ್ಕೋ ಶಾಖೆಗಳಲ್ಲಿ ಹೊಸ ಅಡಿಕೆ ದರ 360 ರೂ. ಗೆ ಖರೀದಿ ಆಗಿದೆ. ಇದೇ ವೇಳೆ ಅಡಿಕೆಗೆ 390 ರೂ. ರವರೆಗೆ ದರ ಏರಿದೆ. ಖಾಸಗಿ ವಲಯದಲ್ಲಿ ಹಳೇ ಅಡಿಕೆಗೆ 400 ರೂ. ನಿಂದ 410 ರೂ. ವರೆಗೂ ಖರೀದಿ ಆಗಿದೆ.
ಕೊರೊನಾ ಲಾಕ್ ಡೌನ್ ಬಳಿಕ ದೇಶಿ ಅಡಿಕೆಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಬಂದಿದ್ದು, ದೇಶದ ಗಡಿಗಳಲ್ಲಿ ಅಡಿಕೆ ಆಮದಿಗೆ ಕಡಿವಾಣ ಹಾಕಿರುವುದಕ್ಕೆ ಅಡಿಕೆ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.