HEALTH TIPS

ಉಕ್ಕಿ ಹರಿದ ಚಂದ್ರಗಿರಿ ನದಿ: ಕಾಸರಗೋಡು ತಾಲೂಕಿನ ಕೆಳಸ್ತರ ಪ್ರದೇಶಗಳು ಜಲಾವೃತ: ಸ್ಥಳೀಯ ನಿವಾಸಿಗಳ ಸ್ಥಳಾಂತರ

  

            ಕಾಸರಗೋಡು: ಚಂದ್ರಗಿರಿ ನದಿ ಉಕ್ಕಿ ಹರಿದ ಪರಿಣಾಮ ಕಾಸರಗೋಡು ತಾಲೂಕಿನ ಕೆಳಸ್ತರ ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿ ವಾಸವಾಗಿದ್ದ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 

         ಕಳನಾಡು ಸಮೂಹ ಗ್ರಾಮಗಳ 14 ಕುಟುಂಬಗಳ ಸದಸ್ಯರನ್ನು ಸಂಬಂಧಿಕರ ಮನೆಗಳಿಗೆ ವರ್ಗಾಯಿಸಲಾಗಿದೆ. ಗ್ರಾಮ ವ್ಯಾಪ್ತಿಯ ಚಳಿಯಗೋಡು, ಪಳ್ಳಿಪ್ಪುರಂ, ಮಣಲ್, ಚೆಮ್ನಾಡ್, ಕೊಳಂಬೆಕ್ಕಾಲ್ ಪ್ರದೇಶಗಳ 64 ಮಂದಿ ಸ್ಥಳಾಂತರಗೊಂಡವರು.

        ಕರಿಚ್ಚೇರಿ ಹೊಳೆ ಉಕ್ಕಿ ಹರಿದು ಕೊಳತ್ತೂರು ಗ್ರಾಮದ 4 ಕುಟುಂಬಗಳ ಸದಸ್ಯರನ್ನು, ಚೆಂಗಳ ಗ್ರಾಮದ ಬೇವಿಂಜೆಯ ಒಂದು ಕುಟುಂಬದ ಸದಸ್ಯರನ್ನೂ ಸಂಬಂಧಿಕರ ಮನೆಗಳಿಗೆ ವರ್ಗಾಯಿಸಲಾಗಿದೆ. ಚಂದ್ರಗಿರಿ ಪ್ರದೇಶದ 16 ಕುಟುಂಬಗಳ 116 ಮಮದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಚಂದ್ರಗರಿ ನದಿ ತಟದ ಕೆಲವು ಪ್ರದೇಶಗಳಲ್ಲಿ ನೆರೆ ಭೀತಿ ಹೆಚ್ಚಳಗೊಳ್ಳುವ ಭೀತಿಯಿದೆ. 

     ಆದೂರು, ಕುಂಬ್ಡಾಜೆ,ನೀರ್ಚಾಲು ಗ್ರಾಮಗಳಲ್ಲಿ ತಲಾ ಒಂದು ಮನೆಗಳು ಭಾಗಶಃ ಹಾನಿಗೊಂಡಿವೆ. ನೀರ್ಚಾಲು ಗ್ರಾಮದ ಮನೆಯೊಂದರ ಆವರಣಗೋಡೆ ಕುಸಿದಿದೆ. 

         ತಳಂಗರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಗಿರುವ ಅಭಯಾರ್ಥಿಗಳ ಶಿಬಿರದಲ್ಲಿ ಈಗ 13 ಕುಟುಂಬಗಳು ಆಸರೆ ಪಡೆದಿವೆ. 

    ಕಾಸರಗೋಡು ನಗರದ ಸಿಟಿಟವರ್ ಸಂಸ್ಥೇಯ ಎದುರುಬದಿಯ ಕಟ್ಟಡದ ಹಿಂಬದಿಯ ಗುಡ್ಡದ ಮಣ್ಣು ಕುಸಿದು ಅಪಾಯ ಸೂಚಿಸುತ್ತಿದೆ. ಸಮೀಪ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಂದಿ ಬೇರೆಡೆ ವರ್ಗಾವಣೆಗೊಳ್ಳುವಂತೆ ಕಾಸರಗೋಡು ಗ್ರಾಮಾಧಿಕಾರಿ ಆದೇಶ ನೀಡಿದ್ದಾರೆ.  

            ಬಿರುಸಿನ ಮಳೆ: 2 ಮರಣ 

     ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇಬ್ಬರೂ ಮಹಿಳೆಯರಾಗಿದ್ದು, ನೀರಿ ಬಿದ್ದು ಕಾಣೆಯಾಗಿದ್ದ ಅವರ ಮೃತದೇಹಗಳು ಪತ್ತೆಯಾಗಿದ್ದುವು.  ಕಳ್ಳಾರ್ ಗ್ರಾಮದ ಕಾಂuಟಿಜeಜಿiಟಿeಜರತ್ತಡಿ ನಿವಾಸಿ ನಾರಾಯಣನ್ ನಾಯರ್ ಅವರ ಪುತ್ರಿ ಶ್ರೀಲಕ್ಷ್ಮಿ(26) ಅವರ ಮೃತದೇಹ ಮನೆ ಬಳಿಯ ನೀರು ತುಂಬಿಕೊಂಡಿರುವ ಹಳ್ಳದಲ್ಲಿ ಭಾನುವಾರ ಪತ್ತೆಯಾಗಿದೆ. ವೆಳ್ಲರಿಕುಂಡ್ ನಲ್ಲಿ ಶನಿವಾರ ಕಪ್ಪಿಲತ್ ಎಂಬ ವೃದ್ಧೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು. ಈ ಮೂಲಕ ಬಿರುಸಿನ ಮಳೆಗೆ ಬಲಿಯಾದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. 

   (ಚಿತ್ರ ಮಾಹಿತಿ: ಚಂದ್ರಗಿರಿ ನದಿಯ ಪೂರ್ವರೂಪ ಪಯಸ್ವಿನಿ ಹೊಳೆ ಕುಂಟಾರು ಪ್ರದೇಶದಲ್ಲಿ ತುಂಬಿ ಹರಿಯುತ್ತಿರುವುದು.)

                     ಚಿತ್ರ: ಎಂ.ಉಡುಪ


    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries