ನವದೆಹಲಿ: ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ಸಂಸ್ಥೆ ಗುರುವಾರ "ಮಾನವ ಕಂಪ್ಯೂಟರ್" ಶಕುಂತಲಾ ದೇವಿ ಅವರಿಗೆ ಗಿನ್ನಿಸ್ ದಾಖಲೆಯ ಪ್ರಮಾಣಪತ್ರವನ್ನು ಮರಣೋತ್ತರವಾಗಿ ನೀಡಿದೆ.
ಶಕುಂತಲಾ ದೇವಿ ಲಂಡನ್ ಇಂಪೀರಿಯಲ್ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ (1980 ಜೂನ್ 18)13 ಅಂಕಿಗಳ ಎರಡು ಸಂಖ್ಯೆಯನ್ನು ಗುಣಿಸಿ 28 ಸೆಕೆಂಡ್ ಗಳಲ್ಲಿ ಉತ್ತರಿಸುವ ಮೂಲಕ ದಾಖಲೆ ಬರೆದಿದ್ದರು.
ಇದೀಗ ಈ ಸಾಧನೆಗೆ ಶಕುಂತಲಾ ದೇವಿಯವರಿಗೆ ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ಸಂಸ್ಥೆ ಪ್ರಮಾಣಪತ್ರ ನೀಡಿದ್ದು ದಿವಂಗತ ಗಣಿತಜ್ಞ ರ ಪುತ್ರಿ ಅನುಪಮಾ ಬ್ಯಾನರ್ಜಿ ಈ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ. "ನಾನು ಹೋದಲ್ಲೆಲ್ಲಾ, ಎಲ್ಲ ಜನರು ಆ ದಾಖಲೆಯ ಬಗ್ಗೆ ಮಾತನಾಡುತ್ತಿದ್ದರು. ಹಾಗಾಗಿ ಇದು ವಿಶ್ವದ ಅತಿದೊಡ್ಡ ಸಾಧನೆ ಎಂದು ನನಗೆ ತಿಳಿದಿತ್ತು. ಅದೊಂದು ಅದ್ಭುತ!" ಅನುಪಮಾ ಪಿಟಿಐಗೆ ತಿಳಿಸಿದ್ದಾರೆ.
ಶಕುಂತಲಾ ದೇವಿ ಜೀವನಾಧಾರಿತ ಅದೇ ಹೆಸರಿನ ಚಿತ್ರ ಶುಕ್ರವಾರ ಒಟಿಟಿ ಮೂಲಕ ವಿಶ್ವಾದ್ಯಂತ ತೆರೆಕಂಡಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ಶಕುಂತಲಾ ದೇವಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನು ಮೆನನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.
I feel honoured to be able to share your journey with the world.
Thank you Guinness World Records for honouring Shakuntala Devi with this new certificate!
#ShakuntalaDeviOnPrime
@GWR #AnupamaBanerji #AjayKumar @PrimeVideoIN @sanyamalhotra07 @Jisshusengupta @TheAmitSadh