ತಿರುವನಂತಪುರ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಥನಪುರಂ ಅಗ್ನಿಶಾಮಕ ಕೇಂದ್ರದ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಅಧಿಕಾರಿ ಆಶಿಶ್ ದಾಸ್ 291 ನೇ ಯಾರ್ಂಕ್ ಪಡೆದಿದ್ದಾರೆ. ಆಶಿಶ್ ಕೊಲ್ಲಂನ ಮುಖತಲಾ ಮೂಲದವರು. ಕರ್ತವ್ಯದಲ್ಲಿದ್ದಾಗ ಆಶಿಶ್ ತನ್ನ ಯಶಸ್ಸಿನ ಬಗ್ಗೆ ಭಾರೀ ಉತ್ಕಟತೆಯಿಂದ ಗೆಲುವಿನ ಮಟ್ಟಲೇರುವ ಕನಸುಹೊತ್ತಿದ್ದನು. ತನ್ನ ಗೆಲುವನ್ನು ಕೋವಿಡ್ ಹೋರಾಟಗಾರರಿಗೆ ಅರ್ಪಿಸುತ್ತೇನೆ ಎಂದು ಆಶಿಶ್ ಹೇಳಿರುವರು.
ಅವರು ತಮ್ಮ ಯಶಸ್ಸಿಗೆ ವೈದ್ಯಕೀಯ ಕ್ಷೇತ್ರದ ವೈದ್ಯರು, ದಾದಿಯರು ಮತ್ತು ಆರೋಗ್ಯ ವಿಭಾಗದ ಎಲ್ಲರೂ ಕಾರಣವೆಂದು ಹೇಳುತ್ತಾರೆ. ತಾನು ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡದಿದ್ದರೆ ಅವರು ನಾಗರಿಕ ಸೇವೆಯಲ್ಲಿ ಇರುತ್ತಿರಲಿಲ್ಲ. ಸಹೋದ್ಯೋಗಿಗಳು ತುಂಬಾ ಬೆಂಬಲ ನೀಡಿದ್ದಾರೆ ಎಂದು ಆಶಿಶ್ ದಾಸ್ ಹೇಳಿದರು.
ಆಶಿಶ್ 2012 ರಲ್ಲಿ ಅಗ್ನಿಶಾಮಕ ದಳಕ್ಕೆ ಸೇರಿದ್ದರು. ತರಬೇತಿ ಪರೀಕ್ಷೆಯಲ್ಲಿ ಪ್ರಥಮ ಯಾರ್ಂಕ್ ಪಡೆದ ನಂತರ ನಾಗರಿಕ ಸೇವೆಗಾಗಿ ಪ್ರಯತ್ನಿಸಲು ಒತ್ತಾಯಿಸಲಾಯಿತು ಎಂದು ಆಶಿಶ್ ಹೇಳುತ್ತಾರೆ. ಆರು ವರ್ಷಗಳ ಕಠಿಣ ಪರಿಶ್ರಮದ ನಂತರ ಆಶಿಶ್ ಯಶಸ್ವಿಯಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಸಂದರ್ಶನದ ಅಂಕಗಳನ್ನು ತಿಳಿಯಲಾಗುವುದು ಎಂದು ಆಶಿಶ್ ಹೇಳಿದರು. ಅವರ ಪತ್ನಿ ಸೂರ್ಯ ವೃತ್ತಿಯಲ್ಲಿ ದಾದಿ. ಓರ್ವೆ ಎಳೆಯ ಪುತ್ರಿಯೂ ದಂಪತಿಗಳಿಗಿದೆ.