ಮಲಪ್ಪುರಂ: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ದುಬೈನಿಂದ ಕರಿಪ್ಪುರ್ ಗೆ ಆಗಮಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು ಪೈಲಟ್ ಮೃತಪಟ್ಟನೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನವು ರನ್ ವೇ ಯಲ್ಲಿ ಇಳಿಯುತ್ತಿರುವಂತೆ ತೀವ್ರ ಮಳೆಯಿಂದ ಜಾರಿತೆಂದು ತಿಳಿಯಲಾಗಿದೆ. ವಿಮಾನದ ಪೈಲಟ್‍ಗಳು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 179 ಜನರಿದ್ದರು ಎಂದು ತಿಳಿದುಬಂದಿದೆ.
ಭಾರಿ ಮಳೆಯಿಂದಾಗಿ ಅಪಘಾತ ಸಂಭವಿಸಿದೆ. ವಿಮಾನ ಅಪಘಾತದ ಶಬ್ದ ಕೇಳಿದ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದರು. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸೂಚನೆಗಳು ಲಭ್ಯವಾಗಿದೆ. ಆದರೆ ಪ್ರಯಾಣಿಕರು ಇಳಿಯುವ ತರಾತುರಿಯಲ್ಲಿದ್ದು ಆಸನದಿಂದ ಏಳುವ ಹಂತದಲ್ಲಿ ಅಪಘಾತವಾಗಿರುವುದರಿಂದ ಸಾವುಗಳು ಸಂಭವಿಸಲಾರವೆನ್ನಲಾಗಿದೆ. ವಿಮಾನದ ಕ್ಯಾಪ್ಟನ್ ಗಳ ಆಸನದ ಮುಂಭಾಗವು ಸಂಪೂರ್ಣವಾಗಿ ನಾಶವಾಗಿದ್ದು ಆಂಬುಲೆನ್ಸ್, ಅಗ್ನಿಶಾಮಕ ದಳ ಮತ್ತು ಪೆÇಲೀಸರು ವಿಮಾನ ನಿಲ್ದಾಣಕ್ಕೆ ಧಾವಿಸಿದ್ದಾರೆ.