ನವದೆಹಲಿ: ಸುಪ್ರೀಂ ಕೋರ್ಟ್ ನ ಕಲಾಪದಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಉಲ್ಲೇಖಿಸಿ ಲಘು ಹಾಸ್ಯದ ಸಂದರ್ಭವೊಂದು ವಿಚಾರಣೆ ವೇಳೆ ನಡೆದಿದೆ.
ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಭಗವಾನ್ ಶ್ರೀ ಕೃಷ್ಣ, ಮಹಾಭಾರತವನ್ನು ಉಲ್ಲೇಖಿಸಿ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಜಾಮೀನು ಅರ್ಜಿಯ ವಿಚಾರಣೆನಡೆಸಿದ ಸಂದರ್ಭದಲ್ಲಿ, "ಶ್ರೀ ಕೃಷ್ಣ ಜೈಲಿನಲ್ಲಿ ಇಂದು ಜನಿಸಿದ ದಿನವಲ್ಲವೇ....
ನಿಮಗೆ ಜಾಮೀನು ಬೇಕೇ? ಇಲ್ಲವೆ ಜೈಲು ಬೇಕೇ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಪ್ರಕರಣದಲ್ಲಿ ವಾದಿಸುತ್ತಿದ್ದ ವಕೀಲರು "ನಮಗೆ ಜಾಮೀನು ಬೇಕು" ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, "ಸರಿ... ಧಾರ್ಮಿಕ ನಂಬಿಕೆಗಳ ಬಗ್ಗೆ ಅಷ್ಟಾಗಿ ನಂಬಿಕೆಗಳಿಲ್ಲವೆನೋ ಎಂದು ಉತ್ತರಿಸಿದರು. ಇನ್ನೂ... ಮತ್ತೊಂದು ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಬೊಬ್ಡೆ "ಮಹಾಭಾರತ"ವನ್ನು ಉಲ್ಲೇಖಿಸಿದರು.
ಸಿಎಎ ವಿರೋಧಿ ಪ್ರತಿಭಟನೆಯ ವಿಷಯದಲ್ಲಿ, ಡಾ.ಕಫಿಲ್ ಖಾನ್ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಬಹುದೇ? ಅದನ್ನು ಪ್ರತ್ಯಕ್ಷ ಹಾಜರಿ ಎಂದು ಪರಿಗಣಿಸುತ್ತಿರಾ? ಎಂದು ವಕೀಲೆ ಇಂದಿರಾ ಜೈಸಿಂಗ್ ಪ್ರಶ್ನಿಸಿದರು. "ಮಹಾಭಾರತದ ಕಾಲದಿಂದಲೂ ವರ್ಚುವಲ್ ಹಿಯರಿಂಗ್ಸ್ ಎಂಬ ವ್ಯವಸ್ಥೆ ಇದೆ. ಮಹಾಭಾರತದಲ್ಲಿ "ಸಂಜಯ ಉವಾಚ" ಎಂದು ಇದೆಯಲ್ಲಾ... ಎಂದು ಸಿಜೆಐ ಬೊಬ್ಡೆ ಹೇಳಿದರು.