ಕಾಸರಗೋಡು: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಸಮಾರಂಬವನ್ನು ಪಥಸಂಚಲನವಿಲ್ಲದೆ ಸರಳವಾಗಿ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ವಿದ್ಯಾನಗರ ನಗರಸಭೆ ಕ್ರೀಡಾಂಗಣದಲ್ಲಿ ಆ. 15ರಂದು ಬೆಳಗ್ಗೆ 9ಕ್ಕೆ ನಡೆಯಲಿರುವ ನಡೆಯಲಿರುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಧ್ವಜಾರೋಹಣ ನಡೆಸುವರು.ಸಾಂಕೇತಿಕವಾಗಿ ನಡೆಯಲಿರುವ ಪಥಸಂಚನದಲ್ಲಿ ಪೆÇಲೀಸ್ ಸೇನೆಯ 3 ತಂಡಗಳು, ಅಬಕಾರಿ ದಳದ ಒಂದು ತಂಡ ಮಾತ್ರ ಭಾಗವಹಿಸಲಿವೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸಹಿತ ಆಮಂತ್ರಿತರು ಮಾತ್ರ ಪಾಲ್ಗೊಳ್ಳುವರು.ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶಾತಿ ಇರುವುದಿಲ್ಲ. ಮೂವರು ವೈದ್ಯರುಗಳು, ಇಬ್ಬರು ದಾದಿಯರು, ಇಬ್ಬರು ಪ್ಯಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ಶುಚೀಕರಣ ಕಾರ್ಮಿಕರು ಇರುವರು. ಕೋವಿಡ್ ರೋಗದಿಂದ ಗುಣಮುಖರಾದ ಮೂವರು ವಿಶೇಷ ಆಮಂತ್ರಿತರಾಗಿರುವರು. ಗರಿಷ್ಠ ನೂರು ಮಂದಿ ಆಮಂತ್ರಿತರು ಪಾಲ್ಗುಳ್ಳುವಂತೆನೋಡಿಕೊಳ್ಳಲಾಗುವುದು.
ರಾಜ್ಯ-ಸ್ಥಳೀಯಾಡಳಿತ-ಆರೋಗ್ಯ ಇಲಾಖೆಗಳ ಆದೇಶ ಪ್ರಕಾರ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಪೆÇಲೀಸ್‍ಪಡೆ, ಸ್ಕೌಟ್ ಮತ್ತು ಗೈಡ್ಸ್, ಎನ್.ಸಿ.ಸಿ. ಜ್ಯೂನಿಯರ್ ವಿಭಾಗ ಈ ಬಾರಿ ಭಾಗವಹಿಸಲು ನುಮತಿಯಿಲ್ಲ. ದೇಶಭಕ್ತಿ ಗಾಯನಕ್ಕಾಗಿಸಹ ಶಾಲಾ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ. 65 ವರ್ಷಕ್ಕಿಂತ ಅಧಿಕ ವಯೋಮಾನದ ವೃದ್ಧರು, 10 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಸಮಾರಂಭದಲ್ಲಿ ಪ್ರೇಕ್ಷಕರಾಗಿಯೂ ಭಾಗಿಯಾಗಬಾರದು. ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಕೈಬಿಡಲಾಗಿದೆ. ಸಮಾರಂಭದಲ್ಲಿ ಪದಕ, ಬಹುಮಾನ ವಿತರಣೆಯೂ ಇರುವುದಿಲ್ಲ. ಸಮಾರಂಭದುದ್ದಕ್ಕೂ ಕೋವಿಡ್ ಪ್ರತಿರೋಧ ಸಂಹಿತೆ ಪಾಲಿಕೆಯಾಗಲಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್ ಇತ್ಯಾದಿ ಖಚಿತಪಡಿಸಲಾಗುವುದು.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಈ ತೀರ್ಮಾನಕೈಗೊಳ್ಳಲಾಗಿದೆ. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಡಿ.ವೈ.ಎಸ್.ಪಿ.(ಎಸ್.ಎಂ.ಎಸ್.)ಬಿ.ಹರಿಶ್ಚಂದ್ರ ನಾಯ್ಕ್, ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.