ಕಾಸರಗೋಡು : ಕಾಸರಗೋಡು-ಕಾಞಂಗಾಡ್ ರಸ್ತೆ ಬೇಕಲ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಿಂದ ಈ ಸೇತುವೆ ಮೂಲಕದ ವಾಹನ ಸಂಚಾರ ಆ.14ರಿಂದ ಸೆ.14 ವರೆಗೆ ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ವಾಹನಗಳು ಪಾಲಕುನ್ನು-ಮುದಿಯಕ್ಕಾಲು-ತಚ್ಚಂಗಾಡ್-ಬೇಕಲ ರಸ್ತೆ ಮೂಲಕ ಸಂಚಾರ ನಡೆಸುವಂತೆ ಲೋಕೋಪಯೋಗಿ(ಕೆ.ಎಸ್.ಟಿ.ಪಿ.ವಿಭಾಗ) ಕಾರ್ಯಕಾರಿ ಇಂಜಿನಿಯರ್ ತಿಳಿಸಿರುವರು.