ತಿರುವನಂತಪುರ: ಕೋವಿಡ್ ನಿರ್ಬಂಧಗಳು ಇನ್ನಷ್ಟು ಪ್ರಬಲವಾಗಿದ್ದರೆ ಕೇರಳದಲ್ಲಿ ಕೋವಿಡ್ ಹರಡುವಿಕೆ ಸೆಪ್ಟೆಂಬರ್ ಮಧ್ಯದ ವೇಳೆಗೆ ಕ್ಷೀಣಿಸಲು ಪ್ರಾರಂಭವಾಗುತ್ತದೆ ಎಂದು ಸರ್ಕಾರ ನೇಮಿಸಿದ ತಜ್ಞರ ಸಮಿತಿಯ ಅಧ್ಯಕ್ಷರು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. ಸರ್ಕಾರದ ಕ್ರಮಗಳು ಮತ್ತು ನಿಯಂತ್ರಣ ಕ್ರಮಗಳ ಮೌಲ್ಯಮಾಪನ ಮಾಡಿದ ಸಮಿತಿಯ ಅಧ್ಯಕ್ಷ ಡಾ. ಬಿ ಇಕ್ಬಾಲ್ ವರದಿ ಸಿದ್ದಪಡಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ಸಮಿತಿ ಬೊಟ್ಟುಮಾಡಿದೆ.
ಆದರೆ ಕೋವಿಡ್ ಗೆ ಸಂಬಂಧಿಸಿ ರಾಜ್ಯದಲ್ಲಿ ಕಳವಳಕಾರಿ ಸ್ಥಿತಿ ಇದೆ ಎಂಬ ಮಾಧ್ಯಮ ವರದಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರ ತಜ್ಷ ವರದಿಯನ್ನು ಬಹಿರಂಗ ಪಡಿಸಿದ್ದು ಆತಂಕ ಬೇಡ ಎಮದು ತಿಳಿಸಿದೆ. ಹಿರಿಯ ನಾಗರಿಕರಿಗೆ ಸಂಪರ್ಕತಡೆಯನ್ನು ಮತ್ತು ಹಿಮ್ಮುಖ ಸಂಪರ್ಕತಡೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಬಿ. ಇಕ್ಬಾಲ್ ವರದಿಯಲ್ಲಿ ನಿರ್ದೇಶನ ನೀಡಿದ್ದಾರೆ. ಪ್ರಾಥಮಿಕ ಆರೈಕೆ ಕೇಂದ್ರಗಳು ಮತ್ತು ಕೋವಿಡ್ ಆಸ್ಪತ್ರೆಗಳು ತಜ್ಞರ ಚಿಕಿತ್ಸೆಗೆ ಸಿದ್ಧವಾಗಿವೆ ಎಂದು ವರದಿ ದೃಢಪಡಿಸಿದೆ.
ಕೋವಿಡ್ ಭೀತಿಯ ಈ ಹಂತದಲ್ಲಿ ನಾವು ನಿಯಂತ್ರಣಗಳಿಂದ ಹಿಂದೆ ಸರಿಯಬಾರದು. ಉದಾಸೀನತೆ ತೋರಿದರೆ ಅಪಾಯ ಕಟ್ಟಿಟ್ಟದ್ದು. ಮತ್ತು ಆಶಾವಾದ ಮತ್ತು ಹುರುಪಿನ ಕೋವಿಡ್ ವಿರೋಧಿ ಪ್ರತಿರೋಧದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ಲಸಿಕೆ ಡಿಸೆಂಬರ್‍ನಲ್ಲಿ ಬರುವ ನಿರೀಕ್ಷೆಯಿದೆ ಎಂದು ಡಾ.ಇಕ್ಬಾಲ್ ತಿಳಿಸಿದ್ದಾರೆ. ಜೊತೆಗೆ ಕೋವಿಡ್ ಕ್ಷೀಣಿಸುವ ಮೊದಲು ಒಂದು ಹಂತದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದೂ ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸರ್ಕಾರ ನಿಯಂತ್ರಣ ಕ್ರಮಗಳನ್ನು, ಪ್ರತಿರೋಧ ಚಟುವಟಿಕೆಗಳನ್ನು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಮುಂಬರುವ ವಾರಗಳಲ್ಲಿ ಕೋವಿಡ್ ಪ್ರಕರಣಗಳು ಭಾರಿ ಏರಿಕೆಯಾಗುವ ಎಚ್ಚರಿಕೆ ಇರುವುದರಿಂದ ಪೆÇಲೀಸರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಅಂದಾಜಿಸಲಾಗಿದೆ.
ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸದಲ್ಲಿ ಅತಿಯಾದ ಹೊರೆ ಅನುಭವಿಸುತ್ತಿರುವುದರಿಂದ ಮತ್ತು ಅವರನ್ನು ಪತ್ತೆಹಚ್ಚಲು ತಂತ್ರಜ್ಞಾನವನ್ನು ಬಳಸುವುದರಿಂದ ಅವರಿಗೆ ಸಹಾಯ ಮಾಡುವ ಕೆಲಸವನ್ನು ಪೆÇಲೀಸರಿಗೆ ವಹಿಸಲಾಗುವುದು ಎಂದು ಮಂಗಳವಾರವಷ್ಟೇ ಮುಖ್ಯಮಂತ್ರಿ ಹೇಳಿದ್ದರು. ಆರೋಗ್ಯ ಕಾರ್ಯಕರ್ತರು ಮಾಡಬೇಕಾದ ಕೆಲಸವನ್ನು ಪೋಲೀಸರಿಗೆ ನೀಡಲು ಸರ್ಕಾರ ಉದ್ದೇಶಿಸಿಲ್ಲ. ಆದರೆ ಆರೋಗ್ಯ ಕಾರ್ಯಕರ್ತರ ನೆರವಿಗೆ ಸಂಪೂರ್ಣವಾಗಿ ಪೋಲೀಸರನ್ನು ಬಳಸಲಾಗುವುದೆಂದು ಮುಖ್ಯಮಂತ್ರಿ ಬುಧವಾರ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.