ಕಾಸರಗೋಡು: ಓಣಂ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅಕ್ರಮ ಮದ್ಯ, ಮಾದಕ ಪದಾರ್ಥ ಸಾಗಾಟ, ಮಾರಾಟ ಇತ್ಯಾದಿಗಳು ಅಧಿಕಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಇವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೆ.5 ವರೆಗೆ ಜಿಲ್ಲೆಯಲ್ಲಿ ಓಣಂ ಸ್ಪೆಷ್ಯಲ್ ಎನ್ ಫೆÇೀರ್ಸ್ ಮೆಂಟ್ ಡ್ರೈವ್ ಚಟುವಟಿಕೆ ನಡೆಸಲಿದೆ. ಇದರ ಅಂಗವಾಗಿ ಕಾಸರಗೋಡು ಅಬಕಾರಿ ವಿಭಾಗ ಕಚೇರಿಯಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ, ಕಾಸರಗೋಡು, ಹೊಸದುರ್ಗ ಅಬಕಾರಿ ಸರ್ಕಲ್ ಕಚೇರಿಗಳಲ್ಲಿ ತಲಾ ಒಂದು ಸ್ಟ್ರೈಕಿಂಗ್ ಫೆÇೀರ್ಸ್ ಚಟುವಟಿಕೆ ಆರಂಭಿಸಿವೆ.
ಅಕ್ರಮ ಮದ್ಯ ವ್ಯವಹಾರ ಗಮನಕ್ಕೆ ಬಂದಲ್ಲಿ ಕರೆಮಾಡಬಹುದು:
ಸಾರ್ವಜನಿಕರು ಅಕ್ರಮಮದ್ಯ, ಮಾದಕಪದಾರ್ಥ ಇತ್ಯಾದಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಅಬಕಾರಿ ಇಲಾಖೆಯ ಟಾಲ್ ಫ್ರೀ ನಂಬ್ರಕ್ಕೆ ಯಾ ಇತರ ಕಚೇರಿಗಳ ದೂರವಾಣಿ ನಂಬ್ರಗಳಿಗೆ ಕರೆಮಾಡಿ ಮಾಹಿತಿ ನೀಡಬಹುದು.
ಟಾಲ್ ಫ್ರೀ ನಂಬ್ರ: 155358, ಕಾಸರಗೋಡು ಅಬಕಾರಿ ವಿಭಾಗೀಯ ಕಚೇರಿ: 04994-256728, 9447178066. ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿ: 04994-25532,9400069715. ಹೊಸದುರ್ಗ ಅಬಕಾರಿ ಸರ್ಕಲ್ ಕಚೇರಿ-0467-2204125, 9400069723. ನೀಲೇಶ್ವರ ಅಬಕಾರಿ ಸರ್ಕಲ್ ಕಚೇರಿ-0467-2283174, 9400069729. ಹೊಸದುರ್ಗ ರೇಂಜ್: 0467-2204533, 9400069725. ಕಾಸರಗೋಡು ರೇಂಜ್ : 04994-257541, 9400069716. ಕುಂಬಳೆ ರೇಂಜ್ : 04998-213837, 9400069718, ಬಂದಡ್ಕ ರೇಂಜ್ : 04994-205364, 9400069720, ಬದಿಯಡ್ಕ ರೇಂಜ್ : 04994-261950, 9400069719, ಮಂಜೇಶ್ವರ ರೇಂಜ್ : 04998-273800, 9400069721.