ಕೊಟ್ಟಾಯಂ: ಅಮೆರಿಕದ ಫೆÇ್ಲೀರಿಡಾದಲ್ಲಿ ಪತಿಯಿಂದ ಇರಿತಕ್ಕೊಳಗಾದ ಮಲಯಾಳಿ ನರ್ಸ್ ಮೆರಿನ್ ಜಾಯ್ (28) ಅವರ ಶವವನ್ನು ಮನೆಗೆ ತರಲಾಗುವುದಿಲ್ಲ. 17 ಬಾರಿ ಇರಿತದ ಗಾಯಗಳಾದ ಮೇರಿಯ ದೇಹವನ್ನು ಎಂಬಾಮ್(ದೇಹವನ್ನು ಮರಳಿ ಜೋಡಿಸುವುದು) ಮಾಡುವುದು ಕಷ್ಟ ಎಂದು ಆಸ್ಪತ್ರೆಯ ಅಧಿಕಾರಿಗಳು ಅಮೆರಿಕದ ಸಂಬಂಧಿಕರು ಮತ್ತು ಸ್ನೇಹಿತರಿಗೆ ತಿಳಿಸಿದ್ದಾರೆ. ಮೇರಿಯ ಅಂತ್ಯಕ್ರಿಯೆ ಅಮೆರಿಕದಲ್ಲಿ ಬುಧವಾರ ನಡೆಯಲಿದೆ.
ಈ ಹಿಂದೆ ಮೃತದೇಹವನ್ನು ಮಿಯಾಮಿಯಿಂದ ನ್ಯೂಯಾರ್ಕ್‍ಗೆ ತರಲಾಗುತ್ತದೆ ಮತ್ತು ಮೊದಲ ವಿಮಾನದಲ್ಲಿ ಭಾರತಕ್ಕೆ ತರಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಲೀಧರನ್ ಹೇಳಿದ್ದರು. ಆದಾರೆ ದೇಹವನ್ನು ಎಂಬಾಲ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಕಳಿಸಿಕೊಡಲು ಅಸಾಧ್ಯ ಎನ್ನಬಲಾಗಿದೆ. ಮಿಯಾಮಿಯ ಫ್ಯೂನರಲ್ ಹೋಂನಲ್ಲಿ ಇಡಲಾಗಿರುವ ಶವವನ್ನು ಸಂಬಂಧಿಕರು ಮತ್ತು ಸಹೋದ್ಯೋಗಿಗಳಿಗೆ ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅದನ್ನೂ ಕೈಬಿಡಲಾಯಿತು. ಬ್ರಾಡ್ ಹೆಲ್ತ್ ಆಸ್ಪತ್ರೆಯಲ್ಲಿ ಮಂಗಳವಾರ ಅಂತ್ಯಕ್ರಿಯೆ ವಿಧಿಗಳು ನಡೆಯಲಿದೆ.
ದಕ್ಷಿಣ ಫೆÇ್ಲೀರಿಡಾದ ಕೋರಲ್ ಸ್ಪ್ರಿಂಗ್ಸ್ ಬ್ರೋವರ್ಡ್ ಹೆಲ್ತ್ ಆಸ್ಪತ್ರೆಯ ದಾದಿಯಾಗಿದ್ದ ಮರೀನ್ ಜಾಯ್, ರಾತ್ರಿ ಕರ್ತವ್ಯದ ನಂತರ ಮನೆಗೆ ಮರಳುತ್ತಿದ್ದಾಗ, ನಿವಿನ್ ಎಂದೂ ಕರೆಯಲ್ಪಡುವ ಪತಿ ಫಿಲಿಪ್ ಮ್ಯಾಥ್ಯೂ ಮೇರಿಯನ್ನು ಪಾಕಿರ್ಂಗ್ ಸ್ಥಳದಲ್ಲಿ ಇರಿದು ಕೊಂದಿದ್ದನು. ಕೊನೆಯ ಘಳಿಗೆಯಲ್ಲಿ ಮೇರಿ ನೀಡಿರುವ ಹೇಳಿಕೆಯ ಪ್ರಕಾರ, ಪತಿ ಫಿಲಿಪ್ ಮ್ಯಾಥ್ಯೂ ಅವಳನ್ನು ಇರಿದು ಕಾರಿನಡಿಗೆ ಸಲುಕಿಸಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಯುಎಸ್ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿವಾದಿಗೆ ಪ್ರಸ್ತುತ ಪ್ರಥಮ ದರ್ಜೆ ಕೊಲೆ ಆರೋಪ ಹೊರಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಇಂತಹ ಕಾನೂನು ಸಾಮಾನ್ಯ ಚಾಲ್ತಿಯಲ್ಲಿದೆ. ಆರೋಪಿ ತನಿಖಾ ಅಧಿಕಾರಿಗಳಲ್ಲಿ ತಪ್ಪೊಪ್ಪಿಕೊಂಡಿರುವನೆಂದು ತಿಳಿದುಬಂದಿದೆ.