ನವದೆಹಲಿ: ಚೀನಾದಿಂದ ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಭಾರತ ಸರ್ಕಾರ ಕಲರ್ ಟಿವಿಗಳನ್ನು ನಿಬಂಧಿತ ಪಟ್ಟಿಗೆ ಸೇರಿಸಿದೆ.
ಸ್ಥಳೀಯ ಉತ್ಪಾದಕರ ಉತ್ಪನ್ನಗಳನ್ನು ಉತ್ತೇಜಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. 2020 ರ ಮಾ.31 ಕ್ಕೆ ಮುಕ್ತಾಯಗೊಂಡ ಆರ್ಥಿಕ ವರ್ಷದ ವೇಳೆಗೆ $781 ಮಿಲಿಯನ್ ಮೌಲ್ಯದಷ್ಟು ಕಲರ್ ಟಿವಿಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ಪೈಕಿ 428 ಮಿಲಿಯನ್ ಡಾಲರ್ ಮೌಲ್ಯದ ಟಿ.ವಿಗಳು ವಿಯೆಟ್ನಾಮ್ ನಿಂದ ಆಮದಾದರೆ 292 ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಟಿ.ವಿಗಳು ಚೀನಾದಿಂದ ಆಮದುಗೊಂಡಿತ್ತು. ಈಶಾನ್ಯ ಲಡಾಖ್ ನಲ್ಲಿ ಚೀನಾ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಬಳಿಕ ಭಾರತದಲ್ಲಿನ ಚೀನಾ ಹೂಡಿಕೆ ಹಾಗೂ ಭಾರತಕ್ಕೆ ಆಮದಾಗುತ್ತಿರುವ ಚೀನಾ ಸರಕುಗಳಿಗೆ ಕಡಿವಾಣ ಹಾಕಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ.