ಕುಂಬಳೆ: ಸೀತಾಂಗೋಳಿ ವಿದ್ಯುತ್ ವಿಭಾಗೀಯ ಕಚೇರಿಯ ಉದ್ಯೋಗಿಯೋರ್ವ ವಿದ್ಯುತ್ ಶಾಕ್ ತಗಲಿ ದಾರುಣರಾಗಿ ಮೃತಪಟ್ಟ ಘಟನೆ ನಡೆದಿದೆ.
ಸೀತಾಂಗೋಳಿ ವಿದ್ಯುತ್ ವಿಭಾಗೀಯ ಲೈನ್ ಮ್ಯಾನ್, ಕಾಸರಗೋಡು ಉದಯಗಿರಿ ನಿವಾಸಿ ಪ್ರದೀಪ್(35)ವಿದ್ಯುತ್ ಶಾಕ್ ತಗಲಿ ಮೃತಪಟ್ಟ ದುರ್ದೈವಿ. ಶನಿವಾರ ಮಧ್ಯಾಹ್ನ ವೇಳೆ ಸೂರಂಬೈಲು ಸಮೀಪ ವಿದ್ಯುತ್ ತಂತಿ ದುರಸ್ಥಿಯ ವೇಳೆ ಈ ಅವಘಡ ನಡೆದಿದೆ. ಕೆ ಎಸ್ ಇ ಬಿ ಅಧಿಕೃತರು,ಪೋಲೀಸರು ಭೇಟಿ ನೀಡಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.