HEALTH TIPS

ಇಐಎ: 'ಪರಿಸರ ಪರಿಣಾಮ': ಕೇರಳದ ವಿರೋಧ ಇಂದು ಪ್ರಕಟ

        

            ತಿರುವನಂತಪುರ: ಕೇಂದ್ರ ಜಾರಿಗೆ ತರಲಿರುವ ಇಐಎ ಅಧಿಸೂಚನೆಯು ರಾಜ್ಯದ ಪರಿಸರಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕೇರಳ ಹೇಳಿದೆ. ಈ ಬಗ್ಗೆ ಇಂದು(ಮಂಗಳವಾರ) ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಲಾಗುವುದು. ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ರಾಜ್ಯಕ್ಕೆ ಇಂದಿನ ಗಡುವು ನೀಡಿತ್ತು. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕೇರಳಕ್ಕೆ ಏನಾದರೂ ಸಲಹೆಗಳಿದ್ದರೆ ತಿಳಿಸಲು ತಿಳಿಸಿತ್ತು. ಕೇರಳವು ತನ್ನ ನಿಲುವನ್ನು ತಿಳಿಸುವಲ್ಲಿ  ವಿಳಂಬ ತೋರಿದೆ ಎಂಬ ವಾದಗಳ ಮಧ್ಯೆ ರಾಜ್ಯವು ಇಂದು ತನ್ನ ನಿಲುವು ಸ್ಪಷ್ಟಪಡಿಸಲಿದೆ. 

           ಪ್ರಸ್ತುತ ಉದ್ಯಮ ಅಥವಾ ದೊಡ್ಡ-ಪ್ರಮಾಣದ ಯೋಜನೆಯನ್ನು ಪ್ರಾರಂಭಿಸುವಾಗ ಕಾನೂನಿಗೆ ಇಐಎ ಅಗತ್ಯವಿದೆ. ಆದರೆ ಇದನ್ನು ತೆಗೆದು ಹಾಕಲು ಕೇಂದ್ರದ ಹೊಸ ನೀತಿ ಸೂಚಿಸುತ್ತದೆ. ಇದು ಕಾನೂನಾದ ಬಳಿಕ ಪರಿಸರದ ಮೇಲಾಗುವ ಪರಿಣಾಮವನ್ನು ಉದ್ಯಮ ಪ್ರಾರಂಭದ ಬಳಿಕ ನಡೆಸಿದರೆ ಸಾಕೆಂದು ಕೇಂದ್ರ ಪರಿಸರ-ಅರಣ್ಯ ಸಚಿವಾಲಯ ತೀಲಿಸಿದ್ದು ಕೇಂದ್ರದ ಹೊಸ ನೀತಿ ಪರಿಸರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.

        1994 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಇಐಎ ಪರಿಚಯಿಸಲಾಯಿತು. ಇದನ್ನು 2006 ರಲ್ಲಿ ತಿದ್ದುಪಡಿ ಮಾಡಲಾಯಿತು. ಪರಿಸರ ಪ್ರಭಾವದ ಅಧ್ಯಯನದ ನಂತರವಷ್ಟೇ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಬಹುದು ಎಂದು ಕಾನೂನು ಹೇಳುತ್ತದೆ. ಎಲ್ಲಾ ಪ್ರಮುಖ ಯೋಜನೆಗಳನ್ನು ಇಐಎ ಕಾನೂನಿಗೆ ಅನುಗುಣವಾಗಿ ಪ್ರಾರಂಭಿಸಬೇಕು ಎಂದು ಕಾನೂನು ಷರತ್ತು ವಿಧಿಸುತ್ತದೆ. ಆದರೆ ಕೇಂದ್ರದ ಹೊಸ ಪರಿಸರ ನೀತಿಯು ಅಂತಹ ನಿಬಂಧನೆಗಳನ್ನು ತೆಗೆದುಹಾಕಿ ಬೀಕಾಬಿಟ್ಟಿ ಸ್ವತಂತ್ರವಾಗಿ ಉದ್ದಿಮೆ ಆರಂಭಿಸಲು ಕಾರಣವಾಗಲಿದೆ ಎನ್ನಲಾಗಿದೆ.    

       ಸಿಪಿಎಂ ಈ ಹಿಂದೆ ಕೇಂದ್ರದ ಪರಿಸರ ನೀತಿಯ ವಿರುದ್ಧ ತನ್ನ ನಿಲುವನ್ನು ತಿಳಿಸಿತ್ತು. ಹೊಸ ನೀತಿಯು ದೇಶದ ಖನಿಜ ಸಂಪತ್ತಿನ ಏಕಸ್ವಾಮ್ಯವನ್ನು ಪೆÇೀಷಿಸುವ ಚಾಲನೆಯ ಭಾಗವಾಗಿದೆ ಎಂದು ಸಿಪಿಎಂ ಆರೋಪಿಸಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಕೋವಿಡ್ ತುರ್ತಿನ ಮೇಳೆ ಕೇಂದ್ರ ಕಳವಳಕಾರಿ ನಿಯಮಾವಳಿಗಳನ್ನು ಜಾರಿಗೊಳಿಸುತ್ತಿದ್ದು ಖಂಡನಾರ್ಹ ಎಂದಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries