ಕಾಸರಗೋಡು: ವಂಚನೆ ಪ್ರಕರಣ ಕೇಸುಗಳು ದಾಖಲಾದ ಹಿನ್ನೆಲೆಯಲ್ಲಿ ಮಂಜೇಶ್ವರ ಶಾಸಕ ಸ್ಥಾನಕ್ಕೆ ಎಂ.ಸಿ. ಕಮರುದ್ದಿನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಗ್ರಹಿಸಿದೆ.
ಶಾಸಕನಾಗಿ ಮುಂದುವರಿಯಲು ಖಮರುದ್ದೀನ್ ಅವರಿಗೆ ನೈತಿಕ ಹಕ್ಕಿಲ್ಲ, ಶಾಸಕ ನಾಗಿದ್ದು ತನಿಖೆಯನ್ನು ಇಲ್ಲವಾಗಿಸಲು ಪ್ರಯತ್ನ ಗಳು ಮಾಡುತ್ತಿದೆ ಮುಸ್ಲಿಂ ಲೀಗ್
ಶಾಸಕನಾಗಿದ್ದು ನಿಷ್ಪಕ್ಷ ತನಿಖೆ ಅಸಾಧ್ಯ. ಆದ್ದರಿಂದ ಶಾಸಕ ಸ್ಥಾನವನ್ನು ಬಿಟ್ಟು ತನಿಖೆಯನ್ನು ಎದುರಿಸಲು ಖಮರುದ್ದಿನ್ ತಯಾರಾಗ ಬೇಕೆಂದು ಬಿಜೆಪಿ ಆಗ್ರಹಿಸಿದೆ.
ಖಮರುದ್ದಿನ್ ರ ಚಿನ್ನ ನಿಕ್ಷೇಪ ಸಂಗ್ರಹದ ತನಿಖೆಯನ್ನು ಕೇಂದ್ರ ತನಿಖಾ ತಂಡದಿಂದ ಮಾಡಬೇಕು. ಆರೋಪಿಗಳ ಮೇಲೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.ಶಾಸಕರು ರಾಜೀನಾಮೆ ನೀಡಬೇಕು ಇಲ್ಲವೇ ಎಡರಂಗದ ರಾಜ್ಯ ವಿಧಾನ ಸಭಾ ಸ್ಪೀಕರ್ ಅವರನ್ನು ವಜಾಗೊಳಿಸಬೇಕು.ಇಬ್ಬರು ಚಿನ್ನ ಕಳ್ಳ ಸಾಗಾಟದ ಪ್ರಕರಣದಲ್ಲಿ ಆರೋಪಿಗಳು. ಇದು ಕೇರಳದ ದುರಂತ, ಚಿನ್ನ ಸಾಗಾಟ ಪ್ರಕರಣ ತನಿಖೆಯಲ್ಲಿಯೂ ಮಂಜೇಶ್ವರ ಶಾಸಕರನ್ನು ಪ್ರಶ್ನಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.ಕೇರಳ ಮುಖ್ಯಮಂತ್ರಿ ಯಿಂದ ಸ್ಥಳಿಯ ಶಾಸಕರುಗಳು ಕಳ್ಳರಾಗಿದ್ದಾರೆಯೇ ಎಂದು ಬಿಜೆಪಿ ಲೇವಡಿ ಮಾಡಿದೆ.
ವಕ್ಫ್ ಬೋರ್ಡ್ ನ ಜಮೀನನ್ನು ತನ್ನ ಹೆಸರಿಗೆ ಮಾಡಿದ ಶಾಸಕರಿಗೆ ಮುಸ್ಲಿಂ ಸಮುದಾಯ ಕೂಡ ಬೆಂಬಲ ನೀಡಬಾರದು. ನಾಡನ್ನು ವಂಚಿಸುವವರಿಗೆ ಅಧಿಕಾರದಲ್ಲಿ ಇರಲು ಜನತೆ ಅನುಮತಿ ನೀಡಬಾರದು ಎಂದು ಬಿಜೆಪಿ ಆಗ್ರಹಿಸಿದೆ.