ಕಾಸರಗೋಡು: ಅಂಗಡಿಗಳಲ್ಲಿ, ವಾಣಿಜ್ಯ ಸಂಸ್ಥೆಗಳಲ್ಲಿ ಸಿಬ್ಬಂದಿಗಳು, ಸ್ವ ಉದ್ಯೋಗ ದಾತಾರರು ಕೇರಳ ಶಾಪ್ಸ್ ಆಂಡ್ ಕಮರ್ಶಿ ಯಲ್ ಎಸ್ಟಾಬ್ಲಿಷ್ ಮೆಂಟ್ ವೆಲ್ ಫೇರ್ ಬೋರ್ಡ್ ನಿಂದ ಒದಗಿಸುವ ಕೋವಿಡ್ ಆರ್ಥಿಕಸಹಾಯಕ್ಕೆ ಆ.15 ವರೆಗೆ ಅರ್ಜಿ ಸಲ್ಲಿಸಬಹುದು.peedika.kerala.gov.inಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆಗಳು: 04994255110, 9747931567.
ಆರ್ಟಿಸಾನ್ಸ್ ಲೇಬರ್ ಡಾಟಾ ಬ್ಯಾಂಕ್ : 31 ವರೆಗೆ ನೋಂದಣಿ ನಡೆಸಬಹುದು
ರಾಜ್ಯ ಸರಕಾರ ಕೇರಳ ಆರ್ಟಿ ಸಾಂಸ್ ಡೆವೆಲಪ್ ಮೆಂಟ್ ಕಾರ್ಪ ರೇಷನ್ ನೇತೃತ್ವದಲ್ಲಿ ಸಿದ್ಧಪಡಿಸುವ ಆರ್ಟ ಸಾನ್ಸ್ ಲೇಬರ್ ಡಾಟಾ ಬ್ಯಾಂಕ್ ನೋಂದಣಿ ಆ.31 ವರೆಗೆ ನಡೆಸಲು ಅವಕಾಶಗಳಿವೆ. ಅರ್ಜಿ ಫಾರಂ ಈಗಾಗಲೇ ಪಡೆದುಕೊಮುಂಡವರು ಆ.31ರ ಮುಂಚಿತವಾಗಿ ಅಕ್ಷಯ ಕೇಂದ್ರಗಳಿಗೆ ತೆರಳಿ ನೋಂದಣಿ ನಡೆಸಬೇಕು. ಅಕ್ಷಯ ಕೇಂದ್ರಗಳಲ್ಲಿ ನೋಂದಣಿ ನಡೆಸದೇ ಇರುವವರು ನೋಂದಣಿ ಸರ್ಟಿಫಿಕೆಟ್ ನ ನಕಲನ್ನುmdkadco@gmail.com ಗೆ ಈ-ಮೇಲ್ ಮಾಡಬೇಕು ಯಾ ಮೆನೆಜಿಂಗ್ ಡೈರೆಕ್ಟರ್, ಕೇರಳ ಆರ್ಟಿಸಾನ್ಸ್ ಡೆವೆಲಪ್ ಮೆಂಟ್ ಕಾರ್ಪರೇಷನ್, ಸ್ವಾಗತ್, ಟಿ.ಸಿ.12/755 , ಲಾ ಕಾಲೇಜ್ ರೋಡ್, ತಿರುವನಂತಪುರಂ-695035 ಎಂಬ ವಿಳಾಸಕ್ಕೆ ಕಳುಹಿಸಬೇಕು.