ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಪ್ರಸ್ತುತ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಡ್ಡಾಯ ಪ್ರೋಟೋಕಾಲ್ ನಂತೆ ನಟ ಸಂಜಯ್ ದತ್ ಅವರಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಗಿದ್ದು ಅವರ ವರದಿಗಳು ನೆಗೆಟಿವ್ ಬಂದಿದೆ,
ನಟ ಸಂಜಯ್ ದತ್ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು ಆದರೆ ವೈದ್ಯಕೀಯ ಪರೀಕ್ಷೆಯ ಕಾರಣ ಇನ್ನೂ ಸ್ವಲ್ಪ ಸಮಯದವರೆಗೆ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯಲ್ಲಿ ನಟನಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದಾರೆ.
ಮುನ್ನಾ ಭಾಯ್ ಎಂಬಿಬಿಎಸ್ ಖ್ಯಾತಿಯ ನಟ ಕನ್ನಡದಲ್ಲಿ ಬಹುನಿರೀಕ್ಷಿತ ಚಿತ್ರ "ಕೆಜಿಎಫ್-2" ನಲ್ಲಿ ಅಧೀರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಶನಿವಾರ ಮುಂಜಾನೆ ಖ್ಯಾತ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೊರೋನಾ ನೆಗೆಟಿವ್ ವರದಿ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.