ಅಯೋಧ್ಯೆ: ಕೋಟ್ಯಾಂತರ ಭಾರತೀಯರ ಕನಸಾಗಿರುವ ಅಯೋಧ್ಯೆ ರಾಮ ಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಲಕ್ಷಾಂತರ ರಾಮ ಭಕ್ತರ ಐದು ಶತಮನಾನಗಳ ಕನಸು ನನಸಾಗುವ ಶುಭದನ ಇದೀಗ ಬಂದಿದೆ.
ಬಹು ನಿರೀಕ್ಷಿತ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಹಸ್ತದಿಂದ ಭೂಮಿಪೂಜೆ ನೆರವೇರಲಿದೆ.
ಇದರೊಂದಿಗೆ ಪ್ರಧಾನಿಯವರು ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ರಾಮಮಂದಿರ ನಿರ್ಮಾಣ ವಾಗ್ಧಾನವನ್ನು ಸಕಾರಗೊಳಿಸಲಿದ್ದಾರೆ.
ಮಧ್ಯಾಹ್ನ 12.44.08 ಗಂಟೆಯಿಂದ 12.44.40 ಗಂಟೆಯ 32 ಸೆಕೆಂಡುಗಳ ಶುಭಮುಹೂರ್ತ ನಿಗದಿಯಾಗಿದ್ದು, ಇಷ್ಟು ಅವಧಿಯಲ್ಲಿಯೇ ಮೋದಿಯವರು ಬೆಳ್ಳಿ ಇಟ್ಟಿಗೆ ಇರಿಸಿ ಸಾಂಕೇತಿಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಬೆಳ್ಳಿ ಇಟ್ಟಿಗೆ ಸಾಂಕೇತಿಕವಾದ ಕಾರಣ ಬಳಿಕ, ಅದನ್ನು ಭೂಮಿಪೂಜಾ ಸ್ಥಳದಿಂದ ತೆಗೆದಿರಿಸಲಾಗುತ್ತದೆ.