ಕಾಸರಗೋಡು: ರಾಜ್ಯ ಸರಕಾರ ಜಾರಿಗೊಳಿಸಿರುವ ಎಲ್ಲ ಮಿಷನ್ ಗಳೂ ಯಶಸ್ವಿಯಾಗಲು ಜನಸಹಭಾಗಿತ್ವವೇ ಕಾರಣ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.
ಆದ್ರ್ರಂ ಮಿಷನ್ ಯೋಜನೆಯಲ್ಲಿ ಹೆಚ್ಚುವರಿ ಕುಟುಂಬ ಆರೋಗ್ಯ ಕೇಂದ್ರಗಳನ್ನು ಸೇರಿಸುವ ಯೋಜನೆಗೆ ಸೋಮವಾರ ವೀಡಿಯೋ ನಾನ್ ಫೆರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇವುಗಳಲ್ಲಿ ಆರೋಗ್ಯ ವಲಯದ ಸಮಗ್ರ ಅಭಿವೃದ್ಧಿ ಗುರಿಯಾಗಿಸಿ ಆದ್ರರ್ಂ ಮಿಷನ್ ಜಾರಿಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಬಡ್ತಿಗೊಳಿಸದ ವೇಳೆ ರಾಜ್ಯದ ಆರೋಗ್ಯ ವಲಯದಲ್ಲಿ ಬೃಹತ್ ಬದಲಾವಣೆ ಕಂಡುಬಂದಿದೆ. ರಾಜ್ಯದ ಯಾವ ಗ್ರಾಮೀಣ ವಲಯವೂ ಆರೋಗ್ಯ ವಯದಲ್ಲಿ ಹಿಂದುಳಿಯಬಾರದು ಎಂಬ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತಿದೆ ಎಂದರು.
ಕೋವಿಡ್ ಸೋಂಕಿನ ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆ ತತ್ತರಿಸಿ ಹೋಗಿದ್ದ ಪ್ರದೇಶವಾಗಿತ್ತು. ಆದರೆ ಕೆಲವೇ ಕಾಲದಲ್ಲಿ ಪ್ರತಿರೋಧ ಚಟುವಟಿಕೆಗಳಲ್ಲಿ ಇತರರಿಗೆ ಮಾದರಿಯಾಗುವಷ್ಟು ಈ ಪ್ರದೇಶ ಪ್ರಬಲವಾಗಿದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನ ಆರಂಭ ಈ ನಿಟ್ಟಿನಲ್ಲಿ ಗಮನಾರ್ಹ. ಯುದ್ಧ ಕಾಲದ ಸಿದ್ಧತೆಯಲ್ಲಿ ಕೆಲವೇ ದಿನಗಳಲ್ಲಿ ಒಂದು ಮೆಡಿಕಲ್ ಕಾಲೇಜಿಗೆ ಅಗತ್ಯವಿರುವ ಎಲ್ಲ ಸೌಭ್ಯಗಳನ್ನೂ ಒದಗಿಸಿ, 273 ಹುದ್ದೆಗಳೂ ಸೃಷ್ಟಿಗೊಂಡುವು ಎಂದವರು ನುಡಿದರು.