HEALTH TIPS

ಪ್ರತಿಷ್ಠಿತ ಪಣಿಯಾಡಿ ಪ್ರಶಸ್ತಿಗೆ ತುಳು ಸಾಹಿತಿ ಕುಶಾಲಾಕ್ಷಿ ಕಣ್ವತೀರ್ಥರ "ಕಡಲ ಮುತ್ತು" ಕಾದಂಬರಿ ಆಯ್ಕೆ

    

         ಮಂಜೇಶ್ವರ: ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ 2019-20ನೇ ಸಾಲಿನ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ಸ್ಮಾರಕ ತುಳು ಕಾದಂಬರಿ ಪ್ರಶಸ್ತಿಗೆ ಮಂಜೇಶ್ವರ ಸಮೀಪದ ಕುಂಜತ್ತೂರಿನ ತುಳು ಕನ್ನಡ ಸಾಹಿತಿ ಕುಶಾಲಾಕ್ಷಿ ವಿ.ಕಣ್ವತೀರ್ಥ ಅವರ ಕಡಲ ಮುತ್ತು ಕಾದಂಬರಿ ಆಯ್ಕೆಯಾಗಿದೆ. ಕಳೆದ 26 ವರ್ಷಗಳಿಂದ ತುಳು ಭಾಷಾ ಕಾದಂಬರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ತುಳುಕೂಟ ಉಡುಪಿ ತುಳು ಕಾದಂಬರಿಕಾರ ಎಸ್.ಯು.ಪಣಿಯಾಡಿ ಸ್ಮರಣಾರ್ಥವಾಗಿ ಈ ಪ್ರಶಸ್ತಿ ನೀಡಿಕೊಂಡು ಬಂದಿದ್ದು ಇದುವರೆಗೆ ಪ್ರಶಸ್ತಿ ವಿಜೇತ 32 ತುಳು ಕಾದಂಬರಿಗಳನ್ನು ಪ್ರಕಟಿಸಿದೆ. ನಿವೃತ್ತ ಉಪನ್ಯಾಸಕ,ವಿಮರ್ಶಕ ಪೆÇ್ರ.ಮುರಳಿಧರ ಉಪಾಧ್ಯ ಹಿರಿಯಡ್ಕ, ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ, ಪತ್ರಕರ್ತ, ನಾಟಕಕಾರ ಪ್ರಕಾಶ ಸುವರ್ಣ ಕಟಪಾಡಿ ಈ ಬಾರಿ ತೀರ್ಪುಗಾರರಾಗಿ ಸಹಕರಿಸಿದ್ದರು.

              ತುಳುನಾಡಿನ ಗಡಿನಾಡ ಸಾಹಿತಿಗೆ ಸಂದ ಮಾನ: 

     ಮಂಜೇಶ್ವರ ತಾಲೂಕಿನವರಾದ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಅವರು ಕುವಿಕು ಕಾವ್ಯ ನಾಮದಲ್ಲೂ ಸಾಹಿತ್ಯ ರಚಿಸಿ ಜನಪ್ರಿಯರಾಗಿದ್ದಾರೆ. 2007ರಲ್ಲಿ ಸುರೂತ ಪನಿ(ತುಳು ಕವನ ಸಂಕಲನ), 2017ರಲ್ಲಿ ರಡ್ಡ್ ಪನಿ (ತುಳು ಕವನ ಸಂಕಲನ), 2018ರಲ್ಲಿ ಪತ್ತ್ ಪನಿ ತೀರ್ಥೊ(ತುಳು ಲಘ ಬರಹಗಳ ಸಂಕಲನ) ಪ್ರಕಟಿಸಿದ್ದಾರೆ.

ತುಳು ಭಾಷೆಯ ಬಗ್ಗೆ ಸದಾ ಸ್ಪೂರ್ತಿಯ ತುಡಿತವನ್ನು ಹೊಂದಿರುವ ಇವರು ಕಳೆದೆರಡು ವರ್ಷಗಳ ಹಿಂದೆ ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ ಉಳ್ಳಾಲರಿಂದ ತುಳು ಲಿಪಿಯನ್ನು ಕಲಿತುಕೊಂಡು 2019ರಲ್ಲಿ ಪನಿ ಮುತ್ತು ಮಾಲೆ(ತುಳು ಕವನ ಸಂಕಲನ)ತುಳು ಲಿಪಿಯೊಂದಿಗೆ ಮುದ್ರಿಸಿ ತುಳು ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ.

      ತುಳು-ಕನ್ನಡ ಕತೆ,ಕವನ,ಲೇಖನ  ಬರೆಯುವುದನ್ನು  ಹವ್ಯಾಸವಾಗಿರಿಸಿದ ಇವರು ಪಾಡ್ದನ, ದೈವಾರಾಧನೆ, ತುಳುನಾಡಿನ ಆಚಾರ ವಿಚಾರ ,ಸಂಸ್ಕøತಿ ,ಸಂಪ್ರದಾಯ ,ಆಚರಣೆಗಳ ಬಗ್ಗೆ ಅಭಿರುಚಿ ಬೆಳೆಸಿಕೊಂಡಿರುವ ಸದ್ ಗೃಹಿಣಿಯಾಗಿದ್ದಾರೆ.

        ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ವಿ.ಜಿ.ಶೆಟ್ಟಿ, ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ, ಕಾರ್ಯದರ್ಶಿ ಗಂಗಾಧರ ಕಿದಿಯೂರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries