ತಿರುವನಂತಪುರ: ಸುದ್ದಿ ಮಾಧ್ಯಮ ವರದಿಗಾರರ ವಿರುದ್ದ ತಮ್ಮ ಕಚೇರಿಯಿಂದ ಸೈಬರ್ ಕಿರುಕುಳ ನೀಡಿರುವ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಅಂತಹದೊಂದು ಅಲ್ಪತನಕ್ಕೆ ತನ್ನ ಕಾರ್ಯಾಲಯ ತೊಡಗಿಸಿಕೊಳ್ಳದೆಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅನಾರೋಗ್ಯಕರ ಚರ್ಚೆಗಳನ್ನು ತಪ್ಪಿಸುವುದು ಉತ್ತಮ. ಮಾಧ್ಯಮ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಅವಮಾನಿಸಿಲ್ಲ ಎಂದು ಸಿಎಂ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಕೆಲವರು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಅವರ ಪತ್ರಿಕಾ ಕಾರ್ಯದರ್ಶಿ ಯಾರನ್ನಾದರೂ ಅವಮಾನಿಸಿರಲು ಸಾಧ್ಯವಿಲ್ಲ. ಯಾಕೆಂದರೆ ಈ ಹಿಂದೆ ಅವರು ಪತ್ರಕರ್ತರೇ ಆಗಿದ್ದರು. ಆದ್ದರಿಂದ, ನೀವು ಪರಸ್ಪರ ಮಾತುಕತೆ ನಡೆಸುವುದು ಉತ್ತಮ ಎಂದು ಮುಖ್ಯಮಂತ್ರಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರೆಡ್ ಕ್ರೆಸೆಂಟ್‍ನೊಂದಿಗೆ ಲೈಫ್ ಮಿಷನ್ ಯಾವುದೇ ಹಣಕಾಸಿನ ವ್ಯವಹಾರವನ್ನು ಮಾಡಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಸತಿ ಯೋಜನೆಗಾಗಿ ಏಜೆನ್ಸಿಯನ್ನು ಹುಡುಕುವ ಮತ್ತು ನೀಡುವಲ್ಲಿ ರೆಡ್ ಕ್ರೆಸೆಂಟ್ ನೇರವಾಗಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು. ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿದ ಪ್ರತಿಪಕ್ಷ ನಾಯಕರ ಆರೋಪಕ್ಕೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು.
ಪ್ರತಿಪಕ್ಷಗಳು ದಾಳಿಯನ್ನು ಅರ್ಥೈಸಬಲ್ಲೆ:
ಪ್ರತಿಪಕ್ಷದ ನಾಯಕ ಭಾರೀ ಗೊಂದಲಗೊಳಿಸಿ ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರತಿಪಕ್ಷದ ನಾಯಕರ ಹೇಳಿಕೆಗಳನ್ನು ನೋಡಿದಾಗ, ಅವರು ಈಗಿನ ಮುಖ್ಯಮಂತ್ರಿಯನ್ನು ಬಿಟ್ಟು ಮಾಜಿ ಮುಖ್ಯಮಂತ್ರಿಯನ್ನು ಟೀಕಿಸುತ್ತಿದ್ದಾರೆಯೇ ಎಂಬ ಅನುಮಾನವಿದೆ. ಪ್ರತಿಪಕ್ಷದ ಪ್ರತಿಯೊಂದು ಆರೋಪಗಳಿಗೂ ಉತ್ತರಿಸುತ್ತಾ ಕುಳಿತರೆ ಕೋವಿಡ್ ತುರ್ತಿನ ಈ ಕಾಲದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಜನರಾಡಿಕೊಳ್ಳುವರು ಎಮದು ಪಿಣರಾಯಿ ವಿಜಯನ್ ತಿಳಿಸಿದರು.