ಕಾಸರಗೋಡು: ಜಿಲ್ಲೆಯ ಕೋವಿಡ್ ಅತಿ ಹೆಚ್ಚಿರುವ ಕ್ಲಸ್ಟರ್ ಗಳ ವ್ಯಾಪಾರ ಸಂಸ್ಥೆಗಳನ್ನು ಪೂರ್ಣರೂಪದಲ್ಲಿ ಮುಚ್ಚುಗಡೆ ನಡೆಸಬೇಕು. ಈ ಪ್ರದೇಶಗಳಿಗೆ ಮತ್ತು ಅಲ್ಲಿಂದ ಹೊರಬದಿಗೆ ತೆರಳಲು ವಾಹನಗಳ ಸಂಚಾರಕ್ಕೆ ಅನುಮತಿಯಿಲ್ಲ ಎಂದು ಸಚಿವ ಚಂದ್ರಶೇಖರನ್ ನುಡಿದರು.
ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜನಪ್ರತಿಇಧಿಗಳು, ವ್ಯಾಪಾರಿ ಮುಖಂಡರೊಂದಿಗಿನ ಕೋವಿಡ್ ಅವಲೋಕನ-ಮುಂದಿನ ಕಾರ್ಯತಂತ್ರಗಳ ಸಮಾಲೋಚನೆಯಲ್ಲಿ ಸಚಿವರು ನಿರ್ದೇಶ ನೀಡಿದರು.
ಪ್ರತಿ ವಾರ್ಡ್ ಗಳ ಜನಜಾಗೃತಿ ಸಮಿತಿಗಳಿಗೆ ಸಹಾಯ ಮಾಡಲು 25ರಿಂದ 35 ವರ್ಷ ಪ್ರಾಯದ ಕಾರ್ಯಕರ್ತರನ್ನು ನೇಮಿಸಲಾಗುವುದು. ಇವರಿಗೆ ನಗರಸಭೆ, ಗ್ರಾಮಪಂಚಾಯತ್ ಕಾರ್ಯದರ್ಶಿಗಳು ಪಾಸ್ ಒದಗಿಸುವರು.
ಈಗ ಸಿ.ಎಫ್.ಎಲ್.ಟಿ.ಸಿ.ಗಳು ಇಲ್ಲದಿರುವ ಸ್ಥಳೀಯಾಡಳಿತ ಸಂಸ್ಥೆಗಳು ಸಿ.ಎಫ್.ಎಲ್.ಟಿ.ಸಿಗಳ ನಿರ್ಮಾಣಕ್ಕೆ ಪೂರಕ ವ್ಯವಸ್ಥೆ ಮತ್ತು ಸ್ವಯಂ ಸೇವೆಗೆ ಸಹಕಾರ ನೀಡಬೇಕು ಎಂದು ಸಚಿವ ತಿಳಿಸಿದರು.