HEALTH TIPS

ಬಂಜರು ಭೂಮಿಗೆ ಹಸಿರು ಹೊದಿಕೆಯೊದಗಿಸಿದ ಯುವ ಪಡೆ-ಮನುಷ್ಯ ಕಾಲಿಡಲು ಭೀತಿಪಡುತ್ತಿದ್ದ ಕಾಡು ಆಯ್ತು ಇದೀಗ ಕೃಷಿಗೆ ಯೋಗ್ಯಪಳ್ಳದ ಯುವ ತಂಡದ ಯಶೋಗಾಥೆ

  

             ಬದಿಯಡ್ಕ: ದಶಕಗಳಿಂದ ಮನುಷ್ಯ ಕಾಲಿರಿಸದೇ ಇದ್ದ ಕಾಡುಪೊದೆಗಳಿಂದಾವೃತವಾದ ಜಾಗ ಉತ್ಸಾಹಿ ಯುವಕರ ಸತತ ಪರಿಶ್ರಮದ ಪರಿಣಾಮ ಇದೀಗ ಕೃಷಿ ಯೋಗ್ಯ ಭೂಮಿಯಾಗಿ ಮಾರ್ಪಟ್ಟು ಗಮನ ಸೆಳೆಯುತ್ತಿದೆ.

          ಜಿಲ್ಲೆಯ ಪುತ್ತಿಗೆ ಗ್ರಾಮಪಂಚಾಯಿತಿಯ ಮುಂಡ್ಯತ್ತಡ್ಕ ಸಮೀಪದದ ಪಳ್ಳ ಎಂಬಲ್ಲಿ ಇಂತಹದೊಂದು ಸಾಧನಾಶೀಲ ಚಟುವಟಿಕೆ ಶ್ಲಾಘನೆಗೆ ಪಾತ್ರವಾಗಿದೆ. ಈರ್ವರು ಉಳ್ಳಾಕ್ಲು ದೈವಸ್ಥಾನ ಸಮಿತಿಯ ಮುಖೇನ ಗ್ರಾಮ ಪಂ. ಕೃಷಿ ಇಲಾಖೆಯ ಮಾರ್ಗದರ್ಶನ ಮತ್ತು ಕಾಸರಗೋಡು ರೋಟರಿ ಕ್ಲಬ್ಬಿನ ಸಹಕಾರದೊಂದಿಗೆ ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ಯುವ ಪಡೆ ತಮ್ಮ ಕಾರ್ಯಸಾಧಿಸಿ ಭೇಷ್ ಎನಿಸಿಕೊಂಡಿದೆ. 

         ಜಗತ್ತಿಗೆ ಮಹಾಮಾರಿಯಾಗಿ ಅಂಟಿಕೊಂಡಿರುವ ಕೊರೋನಾ ದೆಸೆಯಿಂದ ಮನೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾದಾಗ ಸಮಯವನ್ನು ವಿನಾ ಕಾರಣ ವ್ಯರ್ಥ ಮಾಡುವ ಬದಲು ಸದ್ವಿನಿಯೋಗಗೊಳಿಸುವ ಉದ್ದೇಶದಿಂದ ಪಾಳು ಬಿದ್ದ ಕಾಡನ್ನು ಕೃಷಿಯೋಗ್ಯವಾಗಿಸುವ ಮನಸ್ಸುಗಳು ಒಂದಾದವು. ಮುರಮಣ್ಣಿನ ಕಾರಣ ಬಂಜರು ಭೂಮಿಯೆಂದೇ ಪರಿಗಣಿಸಲಾಗಿದ್ದ ದಟ್ಟ ಕಾಡುಗಳಿಂದಾವೃತವಾದ ಕೆಲವು ದಶಕಗಳಿಂದ ಮನುಷ್ಯ ಕಾಲಿಡದೇ ಇದ್ದ ದೈವಸ್ಥಾನದ ಮುಂಭಾಗದ ಸುಮಾರು ಒಂದು ಎಕರೆ ಜಾಗವನ್ನು ಸಮತಟ್ಟು ಗೊಳಿಸಿ ನೆಲವನ್ನು ಅಗೆದು ಮಣ್ಣನ್ನು ಮೆದುಗೊಳಿಸಿ ಕೆಲ ದಿನಗಳಲ್ಲಿಯೇ ಭತ್ತ ಕೃಷಿಗೆ ಯೋಗ್ಯವನ್ನಾಗಿ ಮಾಡಲಾಯಿತು. ನೇಜಿ ನೆಡುವ ಕಾರ್ಯ ಮುಗಿದಿದ್ದು ಹೊಸ ಭೂಮಿಯಲ್ಲಿ ಪೈರುಗಳು ಭರವಸೆಯ ಚಿಗುರೊಡೆಯತೊಡಗಿದೆ.  ಭೂಮಿ ತಾಯಿಯ ಸೇವೆ ಮಾಡಿದಲ್ಲಿ ಯಸಶ್ಸು ಖಂಡಿತ ಎಂಬಂತೆ ಮಣ್ಣನ್ನು ಹೊನ್ನಾಗಿಸಿದ ಯುವಕರ ತಂಡದ ಕೆಲಸ ಇತರರಿಗೂ ಮಾದರಿಯೆನಿಸಿದೆ. 

                    ಅಭಿಮತ: 

       ಈ ಹಿಂದೆ ದೈವಸ್ಥಾನದ ಜಾತ್ರೆ ಸಂದರ್ಭ ಸದ್ಬಳಕೆಗಾಗಿ ಸಮೀಪದ ಕೃಷಿಕ ನಾರಾಯಣ ಮೂಲ್ಯ ತುಳುವಾನ ಅವರ ಗದ್ದೆಯನ್ನು ಗೆಳೆಯರ ತಂಡ ಭತ್ತದ ಕೃಷಿಗಾಗಿ ಅವಲಂಬಿಸಿತ್ತು ಮತ್ತು ಶ್ರದ್ದೆಯಿಂದ ತೊಡಗಿಸಿಕೊಂಡಿದ್ದರು. ಆದರೆ ಸುಮಾರು 27 ಸಾವಿರ ರೂ. ಖರ್ಚು ಉಂಟಾದರೂ ದೈವಸ್ಥಾನದ ಸ್ವಂತ ವಠಾರದಲ್ಲಿ ಕೃಷಿಯನ್ನು ಮಾಡಿರುವುದು ಖಷಿ ನೀಡಿದೆ. ಲಾಕ್‍ಡೌನ್ ಆರಂಭದಿಂದಿಲೇ ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದು ಇದೀಗ ಈ ಪ್ರದೇಶ ಹಚ್ಚಹಸುರಿನ ಭತ್ತದ ಪೈರುಗಳಿಂದ ಕಂಗೊಳಿಸಲು ಸಾಧ್ಯವಾಗಿದೆ. 40ಕ್ಕಿಂತಲೂ ಹೆಚ್ಚು ಯುವಕರ, ಮಾತೆಯರ ಶ್ರಮ ಇದರಲ್ಲಿ ಅಡಗಿದೆ. ಯುವಕರ ಸಾಧನೆ ಮೆಚ್ಚುವಂತದ್ದು. ಭೂಮಿಯನ್ನು ಪ್ರೀತಿಸಿದರಿಗೆ ಸೋಲಿಲ್ಲ.  

                                     ಸದಾಶಿವ ಮಾಸ್ತರ್  ಬೇಳ

                        ಕಾಯದರ್ಶಿ, ಈರ್ವರು ಉಳ್ಳಾಕ್ಲು ದೈವಸಾನ ಆಡಳಿತ ಸಮಿತಿ

                           ವಿಶೇಷತೆ:

      ಅಂದ ಹಾಗೆ ಈ ತರುಣರ ಗುಂಪು ಬರಡು ಭೂಮಿಯನ್ನು ಕೃಷಿಯೋಗ್ಯವನ್ನಾಗಿಸಿದ್ದು ಮತ್ತು ಕೃಷಿ ಮಾಡದೇ ನಿಲುಗಡೆಗೊಳಿಸಿದ್ದ ಕಾರ್ಯವನ್ನು ಮುಂದುವರಿಯುವಂತೆ ಮಾಡಿದ್ದು ಇದು ಮೊದಲಲ್ಲ. ಆದರೆ ದಶಕಗಳಿಂದ ಮನುಷ್ಯ ಕಾಲಿಡಲು ಭೀತಿ ಮೂಡಿಸುತ್ತಿದ್ದ ಉಪಯೋಗಶೂನ್ಯ ಜಾಗದ ಕಾಡನ್ನು ಕಡಿದು, ಕೃಷಿಗೆ ಅಯೋಗ್ಯವಾಗಿದ್ದ ಇಲ್ಲಿನ ಮಣ್ಣನ್ನು ಅಗೆದು ಫಲವತ್ತತೆಯನ್ನುಂಟು ಮಾಡಿದ್ದು ಇದೇ ಮೊದಲು ಮತ್ತು ವಿಶೇಷ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries