ಕಾಸರಗೋಡು: ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡುವುದರ ಜೊತೆಗೆ ನಾಡಿಗೆ ಮಾದರಿ ಸೇವೆ ಸಲ್ಲಿಸುವ ಮೂಲಕ ಹರಿತ ಕ್ರಿಯಾ ಸೇನೆ ಗಮನಸೆಳೆಯುತ್ತಿದೆ.
ವಿಕೇಂದ್ರಿತ ತ್ಯಾಜ್ಯ ಸಂಸ್ಕರಣೆ ಗುರಿಯನ್ನು ಹೊಂದಿ 2017 ರಿಂದ ರಾಜ್ಯದಲ್ಲಿ ಸ್ಥಳೀಯಾಡಳಿತ ಸಂ ಸ್ಥೆಗಳ ವ್ಯಾಪ್ತಿಯಲ್ಲಿ ಹರಿತ ಕ್ರಿಯಾ ಸೇನೆಗಳು ತಮ್ಮ ಚಟುವಟಿಕೆ ಆರಂಭಿಸಿವೆ. ಹರಿತ ಕೇರಳಂ ಮಿಷನ್, ಶುಚಿತ್ವ ಮಿಷನ್, ಕ್ಲೀನ್ ಕೇರಳಕಂಪನಿ, ಸ್ಥಳೀಯಾಡಳಿತ ಸಂಸ್ಥೆ, ಕುಟುಂಬಶ್ರೀ ಸಹಿತ ಇಲಾಖೆಗ ಸಂಯೋಜಿತ ಯೋಜನೆಯ ರೂಪದಲ್ಲಿ ಹರಿತ ಕ್ರಿಯಾ ಸೇನೆ ಚಟುವಟಿಕೆ ನಡೆಸುತ್ತಿದೆ. ಸರಿಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರು ಈ ಮೂಲಕ ರಾಜ್ಯದಲ್ಲಿ ಶಾಶ್ವತ ಆದಾಯ ಕಂಡುಕೊಂಡಿದ್ದಾರೆ.
ಸರಾಸರಿ 10-30 ವರೆಗಿನ ಸದಸ್ಯರು ಹರಿತ ಕ್ರಿಯಾ ಸೇನೆಯೊಂದರಲ್ಲಿ ಇರುತ್ತಾರೆ. ಮನೆಗಳಿಂದ ಅಜೈವಿಕ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ಕರಣೆ ನಡೆಸುವ ಮೂಲಕ ಬಲುದೊಡ್ಡ ಸಮಾಜ ಸೇವೆಯನ್ನು ಈ ಸೇನೆ ನಡೆಸುತ್ತಿದೆ.
ಹರಿತ ಕ್ರಿಯಾ ಸೇನೆಗಳಿಗೆ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮದಿಂದ ಸಾಲ ಸೌಲಭ್ಯ :
ಈ ಹರಿತ ಕ್ರಿಯಾ ಸೇನೆ ಸದಸ್ಯೆಯರಿಗೆ ಹೆಚ್ಚುವರಿ ಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸಾಲ ಸೌಲಭ್ಯ ಒದಗಿಸಲಿದೆ.
ರಾಷ್ಟ್ರೀಯ ಸಹಾಯಿ ಕರ್ಮಚಾರಿ ಕಾರ್ಪರೇಷನ್( ಎನ್.ಎಸ್.ಕೆ.ಎಫ್.ಡಿ.ಸಿ.) ರಾಯ ಮಟ್ಟದ ಚಾನೆಲಿಂಗ್ ಏಜೆನ್ಸಿಯಾಗಿರುವ ಮಹಿಳಾ ಅಭಿವೃಧ್ಧಿ ನಿಗಮ ಆ ಕಾರ್ಪರೇಷನ್ ನ ಸಾಲ ಯೋಜನೆಗಳನ್ನು ಹರಿತ ಕ್ರಿಯಾ ಸೇನೆ ಸದಸ್ಯೆಯರಿಗೆ ರಾಜ್ಯದಲ್ಲಿ ಒದಗಿಸಲಿದೆ. ನಿಗಮ ಎನ್.ಎಸ್.ಕೆ.ಎಫ್.ಡಿ.ಸಿ.ಯಿಂದ ಸಾಲ ಪಡೆಯುವ ನಿಟ್ಟಿನಲ್ಲಿ 100 ಕೋಟಿ ರೂ. ವರೆಗೆ ಗ್ಯಾರೆಂಟಿಯನ್ನು ರಾಜ್ಯ ಸರಕಾರ ಮಂಜೂರು ಮಾಡಿದೆ. ಚಟುವಟಿಕೆಗಳನ್ನು ವಿಸ್ತೃತಗೊಳಿಸುವ ಮತ್ತು ವಿವಿಧೆಡೆ ಘಟಕಗಳನ್ನು ಆರಂಭಿಸುವ ನಿಟ್ಟಿನಲ್ಲಿ ವಿವಿಧ ಹರಿತ ಕ್ರಿಯಾ ಸೇನೆಗಳಿಗಾಗಿ 30 ಕೋಟಿ ರೂ. ಸಾಲವನ್ನು ಕುಟುಂಬಶ್ರೀ ಮುಖಾಂತರ ಈ ವರ್ಷ ವಿತರಣೆ ನಡೆಸಲು ಉದ್ದೇಶಿಸಲಾಗಿದೆ.
ಪ್ರಧಾನ ಸಾಲ ಸೌಲಭ್ಯಗಳು:
1. ನೌಕರಿ ಸಂಬಂಧ ವಾಹನ ಖರೀದಿಗೆ.
2. ಘಟಕ ಅಭಿವೃದ್ಧಿಗೆ
3. ಸಾನಿಟೇಷನ್ ಕಾಯಕ ಸಂಬಂಧ ಉತ್ಪನ್ನಗಳ ಮಾರಾಟ ಮಾರ್ಟ್ ಗಳ ಆರಂಭಕ್ಕೆ.
4. ಹರಿತ ಉದ್ದಿಮೆ ಘಟಕಗಳ ಆರಂಭಕ್ಕೆ.
5. ಸೇನೆಯ ಸದಸ್ಯೆಯರ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ.
ಶೇ 4-5 ವಾರ್ಷಿಕ ಬಡ್ಡಿ ದರದಲ್ಲಿ ಲಭಿಸುವ ಸಾಲದ ಮರುಪಾವತಿಗೆ ಕಾಲಾವಧಿ ಮೂರು ವರ್ಷವಾಗಿದೆ. ವಾಹನ ಖರೀದಿಗೆ ಗರಿಷ್ಠ 15 ಲಕ್ಷ ರೂ. ಸಾಲ ಲಭಿಸಲಿದೆ. ಕಿರು ಉದ್ದಿಮೆಗಳನ್ನು ಆರಂಭಿಸುವುದಿದ್ದಲ್ಲಿ, ಒಬ್ಬ ಸದಸ್ಯೆಗೆ ಗರಿಷ್ಠ 60 ಸಾವಿರ ರೂ. ಸಾಲ ಲಭಿಸಲಿದೆ. ಇಂಥಾ ಸಿ.ಡಿ.ಎಸ್. ಒಂದರ ವ್ಯಾಪ್ತಿಯಲ್ಲಿ 50 ಲಕ್ಷ ವರೆಗಿನ ಮೌಲ್ಯ ಸಾಲ ರೂಪದಲ್ಲಿ ಲಭಿಸಲಿದೆ. ಶುಚೀಕರಣ ಕಾಯಕಕ್ಕೆ ಸಹಾಯಕ ಉಪಕರಣಗಳ ಖರೀದಿಗೆ 15 ಲಕ್ಷ ರೂ. ವರೆಗೆ ಸಾಲ ಲಭಿಸಲಿದೆ.
ಜೊತೆಗೆ ಇವರ ಹೆಣ್ಣುಮಕ್ಕಳಿಗೆ ಪೆÇ್ರಫೆಷನಲ್ ಕೋರ್ಸ್, ವೊಕೇಶನಲ್ ಕಲಿಕೆ ಇತ್ಯಾದಿಗಳಿಗೆ ಶೇ ಮೂರೂವರೆ ಬಡ್ಡಿ ಪ್ರಕಾರ 4-10 ಲಕ್ ರೂ. ವರೆಗೆ ಶಿಕ್ಷಣ ಸಾಲ ಲಭಿಸಲಿದೆ. ನಾಲ್ಕೂವರೆ ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯದ ಕುಟುಂಬದ ಹೆಣ್ಣುಮಕ್ಕಳಿಗೆ ಮಂಜೂರು ಮಾಡುವ ಸಾಲದ ಬಡ್ಡಿಯನ್ನು ಶಿಕ್ಷಣಾರ್ಹತೆ ಪಡೆದ ನಂತರ ಮರಳಿನೀಡಲಾಗುತ್ತದೆ ಎಂಬುದು ಗಮನಾರ್ಹ.
ಕಿರು ಉದ್ದಿಮೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಮೂರು ಕೋಟಿ ರೂ. ಸಾಲ ತಕ್ಷಣ ವಿತರಿಸಲಾಗುವುದು. ಮುಂದಿನ ಹಂತದಲ್ಲಿ ಗ್ರೂಪ್ಗಳಿಗೆ ವಾಹನ ಖರೀದಿಗೆ ಸಾಲ ಮಂಜೂರುಗೊಳ್ಳುವುದು.