HEALTH TIPS

ರಾಜ್ಯದಲ್ಲಿ ಒಂದು ವಾರದಲ್ಲಿ ಲಭಿಸಿದ್ದು ತಿಂಗಳ ಮಳೆ- ಇಂದು ಆರೆಂಜ್ ಅಲರ್ಟ್


      ತಿರುವನಂತಪುರ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಬಿರುಸು ಕಡಿಮೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ರೆಡ್ ಮತ್ತು ಆರೆಂಜ್ ಎಚ್ಚರಿಕೆಗಳನ್ನು ನೀಡಲಾಗಿತ್ತು. ಕಳೆದ 10 ದಿನಗಳಲ್ಲಿ ರಾಜ್ಯಕ್ಕೆ ಒಂದು ತಿಂಗಳಿಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಮುಖ್ಯಮಂತ್ರಿ ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.  

             ಇಂದು 4 ಜಿಲ್ಲೆಗಳಲ್ಲಿ ಆರೆಂಜ್ ಎಚ್ಚರಿಕೆ:

      ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಆರೆಂಜ್ ಎಚ್ಚರಿಕೆ ನೀಡಿದೆ. ಈ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ.ವರೆಗಿನ ಭಾರಿ ಮಳೆಯ ಮುನ್ಸೂಚನೆ ಇದೆ. ನದಿಗಳಲ್ಲಿ ಬಲವಾದ ಪ್ರವಾಹಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಮೀನುಗಾರಿಕೆ ಅಥವಾ ಇತರ ಉದ್ದೇಶಗಳಿಗಾಗಿ ನದಿಗಳನ್ನು ದಾಟಬಾರದು ಅಥವಾ ನದಿಗಳಲ್ಲಿ ಅಥವಾ ಇತರ ಜಲಮೂಲಗಳಲ್ಲಿ ಸ್ನಾನ ಮಾಡಬೇಡಿ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‍ಡಿಎಂಎ) ಎಚ್ಚರಿಸಿದೆ.

          ತಿಂಗಳಲ್ಲಿ ಲಭ್ಯವಾಗಬೇಕಾದ ಮಳೆ ಕಳೆದ 10 ದಿನಗಳಲ್ಲಿ ಹೆಚ್ಚು ಮಳೆ:

    ಕೇಂದ್ರ ಹವಾಮಾನ ಇಲಾಖೆಯ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಕೇರಳದಲ್ಲಿ ಸರಾಸರಿ ಸಾಮಾನ್ಯ ಮಳೆ 427 ಮಿ.ಮೀ ಲಭ್ಯವಾಗಿದೆ. ಕಳೆದ 10 ದಿನಗಳಲ್ಲಿ (ಆಗಸ್ಟ್ 1 ರಿಂದ 10, 2020) ರಾಜ್ಯದಲ್ಲಿ 476 ಮಿ.ಮೀ ಮಳೆಯಾಗಿದೆ. ಅಂದರೆ ಈ ತಿಂಗಳು ನಮಗೆ ಇನ್ನೂ 10 ದಿನಗಳ ಮಳೆ ಹೆಚ್ಚು ಲಭ್ಯವಾಗಿದೆ. ಆಗಸ್ಟ್‍ನಲ್ಲಿ ಕಳೆದ ಮೂರು ವರ್ಷಗಳಿಂದ ಇಂತಹ ಭಾರಿ ಮಳೆ ಮರುಕಳಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

           ಪರಿಹಾರ ಶಿಬಿರಗಳಲ್ಲಿ 6,967 ಕುಟುಂಬಗಳು:

    ರಾಜ್ಯದಲ್ಲಿ ಮಾನ್ಸೂನ್ ತೀವ್ರತೆಯ ತೀವ್ರತೆಯಿಂದ ಭಾರೀ ವಿಪತ್ತುಗಳು ಸಂಭವಿಸಿದೆ. ಇಂತಹ ವೈಪರೀತ್ಯ ಸತತ ಮೂರನೇ ವರ್ಷ ಪುನರಾವರ್ತನೆಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವರು. ಆಗುತ್ತಿರುವ ಭಾರಿ ಮಳೆಯನ್ನು ಎದುರಿಸಲು ರಾಜ್ಯವು ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಕೊಟ್ಟಾಯಂ, ಪತ್ತನಂತಿಟ್ಟು, ಆಲಪ್ಪುಳ, ಎರ್ನಾಕುಳಂ, ವಯನಾಡ್ ಮತ್ತು ಇಡುಕ್ಕಿ ಹೆಚ್ಚು ಮಳೆ ಬಾಧಿತ ಜಿಲ್ಲೆಗಳಾಗಿವೆ. ಜನರನ್ನು ಅಪಾಯಕಾರಿ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಮತ್ತು ಕೋವಿಡ್ ನಿಯಮಾನುಸಾರ 686 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಶಿಬಿರಗಳಲ್ಲಿ 6,967 ಕುಟುಂಬಗಳಿದ್ದು 22,830 ಜನರು ಇದ್ದಾರೆ ಎಂದರು. 

        ನದಿಗಳಲ್ಲಿನ ನೀರಿನ ಮಟ್ಟ ಕುಸಿಯುತ್ತಿದೆ

    ಮಳೆ ನಿಧಾನವಾಗಿ ಕುಂಠಿತಗೊಳ್ಳುತ್ತಿರುವುದರಿಂದ ನದಿಗಳಲ್ಲಿನ ನೀರಿನ ಮಟ್ಟ ಕುಸಿಯತೊಡಗಿದೆ. ಪ್ರವಾಹ ಕಂಡುಬಂದ ಪ್ರದೇಶಗಳಲ್ಲಿ ನೀರು ವೇಗವಾಗಿ ಸಮುದ್ರಕ್ಕೆ ಹರಿಯುತ್ತಿರುವುದು ಕಂಡುಬಂದಿದೆ. ಕೇಂದ್ರ ಜಲ ಆಯೋಗದ ಪ್ರವಾಹ ಎಚ್ಚರಿಕೆ ವ್ಯವಸ್ಥೆಯ ಪ್ರಕಾರ, ಅಚಂಕೋವಿಲಾರ್, ಮಣಿಮಾಲಯರ್ ಮತ್ತು ಮೀನಾಚಿಲ್ ನದಿಗಳಲ್ಲಿನ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟದಲ್ಲಿದೆ. ಆದರೆ ಮಟ್ಟ ಕುಸಿಯುವ ಸೂಚನೆ ಇದೆ. ಸಾಮಾನ್ಯವಾಗಿ ಮಳೆ ಕ್ಷೀಣಿಸುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಮದು ಮುಖ್ಯಮಂತ್ರಿ ಹೇಳಿರುವರು. ಆದರೆ ಇನ್ನೂ ಕೆಲವು ದಿನಗಳವರೆಗೆ ಜಾಗರೂಕರಾಗಿರಲು ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries