ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬರಿದಾಗಿರುವ ಆರ್ಫನೇಜ್ ಕೌನ್ಸಿಲರ್ ಹುದ್ದೆಗೆ ನೇಮಕಾತಿ ಸಂಬಂಧ ಅರ್ಜಿ ಕೋರಲಾಗಿದೆ. ಎಂ.ಎಸ್.ಡಬ್ಲ್ಯೂ.(ಮೆಡಿಕಲ್ ಆಂಡ್ ಸೈಕಾಟ್ರಿಕ್ ಸೋಷ್ಯಕ್ ವರ್ಕ್) ಶಿಕ್ಷಣಾರ್ಹತೆ ಹೊಂದಿರುವವರಿಗೆ ಆದ್ಯತೆಯಿದೆ. ಒಂದೊಮ್ಮೆ ಇವರ ಅಭಾವವಿದ್ದಲ್ಲಿ ಮಕ್ಕಳ, ವಿಶೇಷಚೇತನರ, ವಯೋವೃದ್ಧರ, ಮಹಿಳೆಯರ ವಲಯಗಳಲ್ಲಿ ಕನಿಷ್ಠ ಹತ್ತು ವರ್ಷದ ವೃತ್ತಿ ಅನುಭವ ಹೊಂದಿರುವ ಎಂಎಸ್,ಸಿ, ಸೈಕಾಲಜಿ ಶಿಕ್ಷಣಾರ್ಹತೆಯರುವವರನ್ನೂ, ಈ ಎರಡೂ ವಿಭಾಗಗಳಲ್ಲಿ ಅರ್ಜಿದಾರರು ಇಲ್ಲದೇ ಇದ್ದಲ್ಲಿ ಪರಿಶಿಷ್ಟ ಪಂಗಡ, ಮಲೆನಾಡ, ಒಳನಾಡ ಪ್ರದೇಶಗಳಲ್ಲಿ ಮಕ್ಕಳ, ವಿಶೇಷಚೇತನರ, ವಯೋಜನರ, ಮಹಿಳೆಯರ ವಲಯಗಳಲ್ಲಿ 20 ವರ್ಷದ ವೃತ್ತಿ ಪರಿಚಯ ಹೊಂದಿರುವ ಪದವೀಧರರನ್ನು ಪರಿಶೀಲಿಸಲಾಗುವುದು. ಅರ್ಜಿದಾರರು 25 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಆ.14ರ ಮುಂಚಿತವಾಗಿ ಜಿಲ್ಲಾ ಸಮಾಜ ನೀತಿ ಅಧಿಕಾರಿ, ಸಿವಿಲ್ ಸ್ಟೇಷನ್, ವಿದ್ಯಾನಗರ ಅಂಚೆ, ಕಾಸರಗೋಡು, 671123 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994-255074.