ಕಾಸರಗೋಡು: ಕ್ವಿಟ್ ಇಂಡಿಯಾ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದಲ್ಲಿ ಗೌರವಿಸಲಾದ 10 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಕಾಸರಗೋಡು ಜಿಲ್ಲೆಯ ಇಬ್ಬರು ಹಿರಿಯ ಸ್ವಾತಂತ್ರ್ಯ ಸಂಗ್ರಾಮ ವೀರರನ್ನೂ ಅಭಿನಂದಿಸಲಾಯಿತು.
ಗೋವಾ ವಿಮೋಚನೆ ಸಹಿತ ವಿವಿಧ ಹೋರಾಟದ ಯೋಧರಾಗಿದ್ದ ಕೆ.ವಿ.ನಾರಾಯಣನ್ ಮತ್ತು ಕೆ.ಕುಂಞÂ ಕಣ್ಣನ್ ನಂಬ್ಯಾರ್ ಈ ಗೌರವಾರ್ಪಣೆಗೆ ಭಾಜನರಾದವರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೀಡಿದ್ದ ರಾಷ್ಟ್ರೀಯ ಲಾಂಛನ ಹೊಂದಿರುವ ಫಲಕ, ಅಭಿನಂದನೆ ಪತ್ರ, ಶಾಲು ಸಹಿತ ಸಹಿತ ಇವರನ್ನು ಗೌರವಿಸಲಾಗಿದೆ.
ಭಾನುವಾರ ಈ ಸಂಬಂಧ ಕೂಡ್ಲಿನಲ್ಲಿರುವ ನಿವಾಸಕ್ಕೆ ತೆರಳಿ ಕೆ.ಕುಂಞÂ ಕಣ್ಣನ್ ನಂಬ್ಯಾರ್ ಅವರನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿನಂದಿಸಿದರು.
ಪಡನ್ನಕ್ಕಾಡಿನ ನಿವಾಸಕ್ಕೆ ತೆರಳಿ ಕೆ.ವಿ.ನಾರಾಯಣನ್ ಅವರನ್ನು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಗೌರವಿಸಿದರು.
ದೇಶಾದ್ಯಂತ ಒಟ್ಟು 202 ಮಂದಿ ಸ್ವಾತಂತ್ರ್ಯ ಹೋರಾಟಗಾರರಿಗೆ ಶನಿವಾರ ಗೌರವಾರ್ಪಣೆ ನಡೆದಿದೆ. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿ ಈ ಸಮಾರಂಭ ನಡೆಸಲಾಯಿತು.
(ಸವಿವರಗಳಿಗೆ ಸಮರಸದ ಮುಂದಿನ ಪ್ರಕಟಣೆಗಳನ್ನು ಗಮನಿಸಿ)