ಕಾಸರಗೋಡು: ಬಂಜರು ನೆಲದಲ್ಲಿ ಭತ್ತದ ಕೃಷಿ ಆರಂಭಿಸಿ ಕಾಸರಗೋಡು ಜಿಲ್ಲಾ ಗ್ರಾಮಾಭಿವೃದ್ಧಿ ಇಲಾಖೆ ಸಿಬ್ಬಂದಿ ನಾಡಿಗೆ ಮಾದರಿಯಾಗಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದ ಇಲಾಖೆಯ ಸಹಾಯಕ ಅಭಿವೃದ್ಧಿ ಕಮೀಷನರ್ ಕಚೇರಿಯ ಸಿಬ್ಬಂದಿ ಈ ರೀತಿಯ ಜನಪರ ಚಟುವಟಿಕೆ ನಡೆಸಿದವರು. ಚೆಂಗಳ ಗ್ರಾಮಪಂಚಾಯತ್ ನ ಬಾರಿಕ್ಕಾಡು ಮಹಾವಿಷ್ಣು ದೇವಾಲಯ ಆವರಣದ ಬಯಲಿನ ಒಂದು ಎಕ್ರೆ ಜಾಗದಲ್ಲಿ ನೇಜಿ ನೆಟ್ಟಿದ್ದಾರೆ. ಯಾಂತ್ರಿಕ ಸಹಾಯದೊಂದಿಗೆ ನೇಜಿ ನೆಡುವಿಕೆ ನಡೆದಿದೆ.
ಸಹಾಯಕ ಅಭಿವೃದ್ಧಿ ಕಮೀಷನರ್ ಬೆವಿನ್ ಜಾನ್ ನೇಜಿ ನೆಡುವಿಕೆಗೆ ಚಾಲನೆ ನೀಡಿದರು. ಚೆಂಗಳ ಗ್ರಾಮ ಪಂಚಾಯತ್ ಕೃಷಿ ಅಧಿಕಾರಿ ಸಾಜು, ಎ.ಸಿ.ಡಿ. ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಟಿ.ವಿ.ನಾರಾಯಣನ್, ಬಾರಿಕ್ಕಾಡ್ ಮಹಾವಿಷ್ಣು ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ರತ್ನ ಕುಮಾರ್, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
(ಚಿತ್ರ ಮಾಹಿತಿ: ಬಾರಿಕ್ಕಾಡು ಮಹಾವಿಷ್ಣು ದೇವಾಲಯದ ಆವರಣದ ಬಯಲಿನಲ್ಲಿ ನಡೆದ ಗ್ರಾಮಾಭಿವೃದ್ಧಿ ಇಲಾಖೆ ಸಿಬ್ಬಂದಿಯ ನೇಜಿ ನೆಡುವ ಕಾರ್ಯಕ್ರಮ.)