ಮಲಪ್ಪುರಂ: ಕರಿಪುರ ವಿಮಾನ ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಶುಕ್ರವಾರ ರಾತ್ರಿ 12.40ರ ವೇಳೆಗೆ ಕೊನೆಗೊಂಡಿತು. ರಕ್ಷಣಾ ಕಾರ್ಯಾಚರಣೆಗೆ ಪೆÇಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ನೇತೃತ್ವ ವಹಿಸಿದ್ದರು. ಘಟನೆಯಲ್ಲಿ ಈವರೆಗೆ 14 ಸಾವುಗಳು ವರದಿಯಾಗಿವೆ. 123 ಜನರು ಗಾಯಗೊಂಡಿದ್ದಾರೆ ಎಂದು ಮಲಪ್ಪುರಂ ಪೆÇಲೀಸ್ ಮುಖ್ಯಸ್ಥರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವಿಮಾನವು 35 ಅಡಿ ಆಳದಲ್ಲಿ ಉರುಳಿಬಿದ್ದ ಪರಿಣಾಮ ಸಾವು-ನೋವು ಹೆಚ್ಚಿದೆ.
ಸ್ಥಳೀಯರು ಕೂಡ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಗಂಭೀರ ಗಾಯಗೊಂಡವರೇ ಅತ್ಯಧಿಕ ಪ್ರಮಾಣದಲ್ಲಿದ್ದು, ಸಾವಿನ ಸಂಖ್ಯೆಯೂ ಏರಬಹುದೆಂದು ಅಂದಾಜಿಸಲಾಗಿದೆ.
ಭಾರಿ ಮಳೆಯ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಪ್ರತಿಕೂಲವಾಯಿತು.ಅತಿ ತುರ್ತು ಚಿಕಿತ್ಸೆಗೆ ತಲಪಿಸುವಲ್ಲೂ ತೊಡರುಗಳಾಯಿತೆಂದು ತಿಳಿದುಬಂದಿದೆ. ವಿಮಾನದ ಮುಂಭಾಗದ ತುದಿಯು(ಕಾಕ್ ಪಿಟ್) ಸಂಪೂರ್ಣವಾಗಿ ಪುಡಿಗೈಯ್ಯಲ್ಪಟ್ಟಿದೆ. ವಿಮಾನ ಮಧ್ಯಭಾಗದಲ್ಲಿ ಎರಡು ಹೋಳುಗಳಾಗಿ ವಿಭಜಿಸಲ್ಪಟ್ಟು ಭೀಕರತೆ ಸೃಷ್ಟಿಗೆ ಕಾರಣವಾಯಿತು. ಏತನ್ಮಧ್ಯೆ ವಿಮಾನದಲ್ಲಿದ್ದ 10 ಮಕ್ಕಳಲ್ಲಿ ಐದು ಮಕ್ಕಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಫ್ಲೈಟ್ 1344 ಏರ್ ಇಂಡಿಯಾ ದುಬೈ-ಕರಿಪ್ಪೂರ್(ಕೋಝಿಕ್ಕೋಡ್) ವಿಮಾನ ದುಬೈನಿಂದ ಸಂಜೆ 4.45 ಕ್ಕೆ ಹೊರಟಿದ್ದು ಕರಿಪುರ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ಭಾರಿ ಮಳೆಯಿಂದ ಇಳಿಯುವಿಕೆಯ ನಡುವೆ ಜಾರಿಬಿದ್ದಿರುವುದು ಅಪಘಾತಕ್ಕೆ ಕಾರಣವಾಗಿದೆ. ಎರಡನೇ ಬಾರಿಗೆ ಟೇಕಾಫ್ ಮಾಡಲು ಪ್ರಯತ್ನಿಸುವಾಗ ವಿಮಾನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ವಿಮಾನ ಎರಡು ಭಾಗವಾಯಿತು. ಸತ್ತವರಲ್ಲಿ ಏರ್ ಇಂಡಿಯಾ ಪೈಲಟ್ ಸೇರಿದ್ದಾರೆ. ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಮೃತಪಟ್ಟರು.