ವಾಷಿಂಗ್ಟನ್, ಆ.29 : ಹಾಲಿವುಡ್‌ನ ಸೂಪರ್ ಹಿಟ್ ಚಿತ್ರ 'ಬ್ಲ್ಯಾಕ್ ಪ್ಯಾಂಥರ್'ನ ಸ್ಟ್ಟಾರ್ ನಟ ಚಾಡ್ವಿಕ್ ಬೋಸ್‌ಮನ್ 4 ವರ್ಷಗಳಿಂದ ಕಾಡುತ್ತಿದ್ದ ಕರುಳಿನ ಕ್ಯಾನ್ಸರ್‌ನಿಂದಾಗಿ ಶನಿವಾರ ಲಾಸ್ ಎಂಜಲೀಸ್‌ನಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
43 ವಯಸ್ಸಿನ ಬೋಸ್‌ಮೆನ್ ಈವರೆಗೆ ತನ್ನ ಆರೋಗ್ಯದ ಕುರಿತು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಹಲವು ಶಸ್ತ್ರ ಚಿಕಿತ್ಸೆಯ ಹಾಗೂ ಕೀಮೋಥೆರಪಿಗೆ ಒಳಗಾಗುತ್ತಿದ್ದರೂ ಅದರ ನಡುವೆ ಹಾಲಿವುಡ್‌ನ ಪ್ರಮುಖ ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದ್ದರು ಎಂದು ಅವರ ಕುಟುಂಬ ವರ್ಗ ತಿಳಿಸಿದ್ದಾರೆ.
ಸೂಪರ್ ಹೀರೋ ಸಿನಿಮಾ 'ಬ್ಲ್ಯಾಕ್ ಪ್ಯಾಂಥರ್'ನಲ್ಲಿ 'ಕಿಂಗ್ ಟಿ ಚೆಲ್ಲಾ' ಎಂಬ ಪಾತ್ರಕ್ಕೆ ಚಾಡ್ವಿಕ್ ಜೀವಂತಿಕೆ ತಂದುಕೊಟ್ಟಿದ್ದಾರೆ. ಇದು ಅವರಿಗೆ ಸಿಕ್ಕ ಗೌರವವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
2018ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹೀರೋ ಆಧರಿಸಿದ್ದ ಚಿತ್ರ 'ಬ್ಲ್ಯಾಕ್ ಪ್ಯಾಂಥರ್' ಭಾರೀ ಯಶಸ್ಸನ್ನು ಕಂಡಿತ್ತು. ಚಾಡ್ವಿಕ್‌ರವರಿಗೆ ಹಾಲಿವುಡ್‌ನಲ್ಲಿ ಖ್ಯಾತಿಯನ್ನು ತಂದುಕೊಟ್ಟಿತ್ತು.