ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಧ್ವಜಾರೋಹಣ ನೆರವೇರಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ವಿಶ್ವನಾಥ ಕುಂಬಳೆ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಪೈವಳಿಕೆ, ಪೈವಳಿಕೆ ಸಹಕಾರಿ ಬ್ಯಾಂಕ್ ಸಿಬ್ಬಂದಿ ನವೀನ್ ಪೈವಳಿಕೆ, ಶುಭಾಶಂಸನೆಗೈದರು. ರವೀಂದ್ರನಾಥ್ ಕೆ ಆರ್, ಅಬ್ದುಲ್ ಲತೀಫ್ ಕೊಕ್ಕೆಚಾಲ್, ಸಂಜೀವ ಚೆಂಬ್ರಕಾನ, ಪ್ರವೀಣ್ ಕನಿಯಾಲ, ಸತೀಶ್ ಅರಮಂಗಿಲ, ಪುಷ್ಪಲತ ಕೆ ವಿ, ಸುಮಿತ್ರ ಕೆ, ಲೋಲಾಕ್ಷಿ, ಬಾಲಕೃಷ್ಣ ಕಾಯರ್ಕಟ್ಟೆ ಉಪಸ್ಥಿತರಿದ್ದರು. ಆಚರಣಾ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಎಂ ಎಸ್ ನಿರೂಪಿಸಿದರು.