ತಿರುವನಂತಪುರ: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ನವೀಕರಿಸುವ ಎರಡನೇ ಹಂತ ಪ್ರಾರಂಭವಾಗಿದೆ. ಕರಡು ಪಟ್ಟಿಯಲ್ಲಿ ರಾಜ್ಯದಲ್ಲಿ ಒಟ್ಟು 2,62,24,501 ಮತದಾರರಿದ್ದು, ಇದರಲ್ಲಿ 1,25,40,302 ಪುರುಷರು, 1,36,84,019 ಮಹಿಳೆಯರು ಮತ್ತು 180 ಭಿನ್ನ ಲಿಂಗದ ಜನರಿದ್ದಾರೆ. ಜೂನ್ 17 ರಂದು ಪ್ರಕಟವಾದ ಮತದಾರರ ಪಟ್ಟಿ ಮತ್ತು ಪೂರಕ ಪಟ್ಟಿಗಳನ್ನು ಒಟ್ಟುಗೂಡಿಸಿ ಕರಡಿನಲ್ಲಿ ಪ್ರಕಟಿಸುವ ಮೂಲಕ ಹೆಸರನ್ನು ಸೇರಿಸುವ ಅವಕಾಶವನ್ನು ಸಿದ್ಧಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 26 ರಂದು ಪ್ರಕಟಿಸಲಾಗುವುದು.
ಮತದಾರ ಪಟ್ಟಿಯಲ್ಲಿ ಇನ್ನೂ ಸೇರ್ಪಡೆಯಾಗದವರಿಗೆ ಹೆಸರುಗಳನ್ನು ಸೇರಿಸುವ ಅವಕಾಶ ಆಗಸ್ಟ್ 12 ರಿಂದ ಪ್ರಾರಂಭವಾಗಿತ್ತು. ಅರ್ಜಿಯನ್ನು www.lsgelection.kerala.gov.in ವೆಬ್‍ಸೈಟ್‍ನಲ್ಲಿ ಸಲ್ಲಿಸಬೇಕು. ಆಗಸ್ಟ್ 12 ರಿಂದ 26 ರವರೆಗೆ ಮತದಾರರಿಗೆ ನೋಂದಾಯಿಸಲು, ಸಂಪಾದಿಸಲು ಮತ್ತು ಸ್ಥಳಾಂತರಿಸಲು ಅವಕಾಶವಿದೆ. ಮತದಾರರು ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಕರಡು ಪಟ್ಟಿಯಲ್ಲಿರುವವರ ಹೆಸರನ್ನು ತೆಗೆದುಹಾಕಲು ಅರ್ಜಿಯನ್ನು ನೇರವಾಗಿ ಫಾರ್ಮ್ 5 ರಲ್ಲಿ ಚುನಾವಣಾ ನೋಂದಣಿ ಅಧಿಕಾರಿಗೆ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಮೃತರ ಹೆಸರನ್ನು ಅಧಿಕಾರಿಗಳು ಈ ಅರ್ಜಿಯ ಆಧಾರದಲ್ಲಿ ಹಿಂತೆಗೆಯುತ್ತಾರೆ.
ವಿದೇಶದಲ್ಲಿರುವವರು ತಮ್ಮ ಹೆಸರುಗಳನ್ನು ಆನ್‍ಲೈನ್‍ನಲ್ಲಿ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ. ಆನ್‍ಲೈನ್ ಅರ್ಜಿಯ ಮುದ್ರಣ ಪೆÇೀಸ್ಟ್ ಅನ್ನು ವಿದೇಶದಲ್ಲಿರುವವರಿಗೆ ಕಳುಹಿಸಲು ಸಾಧ್ಯವಾಗದಿದ್ದರೆ, ಸಹಿ ಮತ್ತು ಫೆÇೀಟೋದೊಂದಿಗಿನ ಅರ್ಜಿಯನ್ನು ಸ್ಕ್ಯಾನ್ ಮಾಡಿ ಇಮೇಲ್ ಮೂಲಕ ಕಳುಹಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.