ಈ ಹಿಂದೆ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ತಾವು ಹುಟ್ಟಿದ ದಿನಾಂಕವನ್ನು ತಪ್ಪಾಗಿ ನೀಡಿದ್ದಲ್ಲಿ ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಆಟಗಾರರನ್ನು ಅಮಾನತುಗೊಳಿಸಲಾಗುವುದಿಲ್ಲ. ಅವರು ತಮ್ಮ ಸರಿಯಾದ ಜನ್ಮ ದಿನಾಂಕವನ್ನು ತಿಳಿಸಿದ್ದಲ್ಲಿ, ವಯಸ್ಸಿನ ಪಂದ್ಯಾಕೂಟಗಳಲ್ಲಿ ಭಾಗವಹಿಸಲು ಅವಕಾಶವಿದೆ.
ಒಂದೊಮ್ಮೆ ಬಹಿರಂಗ ಪಡಿಸದೇ ಇದ್ದಲ್ಲಿ, ನಕಲಿಯ ಬಗ್ಗೆ ಮಾಹಿತಿ ಸಿಕ್ಕಿದಾಕ್ಷಣ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗುವುದು ಮತ್ತು ಅವದಿ ಪೂರ್ಣಗೊಂಡ ನಂತರ ಅವರನ್ನು ಕೂಟಗಳಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.
ಹಿರಿಯ ಪುರುಷರು ಮತ್ತು ಮಹಿಳೆಯರು ಸೇರಿದಂತೆ ವಿಳಾಸ ವಂಚನೆ ಮಾಡುವ ಎಲ್ಲ ಕ್ರಿಕೆಟಿಗರನ್ನು ಎರಡು ವರ್ಷಗಳ ಕಾಲ ನಿಷೇಧಿಸಲು ತೀರ್ಮಾನಿಸಲಾಗಿದೆ. ಮತ್ತು ಅವರಿಗೆ ಸ್ವಯಂ ಬಹಿರಂಗ ಪಡಿಸಲು ಅವಕಾಶವಿರುವುದಿಲ್ಲ.
ಬಿಸಿಸಿಐ 16 ವರ್ಷದೊಳಗಿನ ವಯೋಮಾನದ ಪಂದ್ಯಾವಳಿಗಾಗಿ, 14-16 ವರ್ಷದೊಳಗಿನ ಆಟಗಾರರಿಗೆ ಮಾತ್ರ ನೋಂದಾಯಿಸಲು ಅನುಮತಿ ನೀಡಲಿದೆ.