ಕಾಸರಗೋಡು: ಕೋವಿಡ್ ದೃಢಪಡಿಸಿದ ಮಹಿಳೆಗೆ ಆಂಬ್ಯುಲೆನ್ಸ್‍ನಲ್ಲಿ ಹೆರಿಗೆಯಾದ ಘಟನೆ ನಡೆದಿದೆ. ಉಪ್ಪಳದ ಮಹಿಳೆಯೊಬ್ಬರು ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಹೆರಿಗೆಗೆಂದು ತೆರಳುತ್ತಿದ್ದಾಗ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಆರೋಗ್ಯಪೂರ್ಣರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯನ್ನು ಅನಾರೋಗ್ಯದ ಕಾರಣ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಧಯೆ ಹೆರಿಗೆಯಾಯಿತು.
ಪ್ರಯಾಣದ ಸಮಯದಲ್ಲಿ ಯುವತಿಗೆ ಹೆರಿಗೆ ನೋವು ಅನುಭವವಾಗಿದ್ದು ಕೂಡಲೇ ಮಹಿಳಾ ದಾದಿಯರಿಗೆ ದಾರಿಯ ಮಧ್ಯೆ ವ್ಯವಸ್ಥೆಗೊಳಿಸಲಾಯಿತು. 108 ಆಂಬ್ಯುಲೆನ್ಸ್‍ನಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞರಾದ ಶ್ರೀಜಾ ಆಂಬುಲೆನ್ಸ್‍ಗೆ ಹತ್ತಿದರು. ಪಯ್ಯನ್ನೂರು ಸಮೀಪದ ಕೊಯತಾಯಾಮುಕ್ಕು ತಲುಪಿದಾಗ ಯುವತಿಯ ಸ್ಥಿತಿ ಹದಗೆಟ್ಟಿತು. ಆಂಬ್ಯುಲೆನ್ಸ್‍ನಲ್ಲಿ ಜನ್ಮ ನೀಡುವ ಸ್ಥಿತಿಯಲ್ಲಿದ್ದಳು. ನಂತರ ಆಂಬ್ಯುಲೆನ್ಸ್ ದಾರಿಯಲ್ಲಿ ನಿಂತಿತು. ತುರ್ತು ವೈದ್ಯಕೀಯ ತಂತ್ರಜ್ಞ ರಾಬಿನ್ ಜೋಸೆಫ್ ಕೈಜೋಡಿಸಿ ಶ್ರೀಜಾರಿಗೆ ಸಹಾಯಕ್ಕೆ ಧಾವಿಸಿದರು. ಬೆಳಿಗ್ಗೆ 8.23 ಕ್ಕೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು. ಆಂಬ್ಯುಲೆನ್ಸ್ ನಂತರ ಪರಿಯಾರಂ ವೈದ್ಯಕೀಯ ಕಾಲೇಜಿಗೆ ತಲಪಿಸಲಾಯಿತು.
ಮುಳಿಯಾರ್ ಸಮುದಾಯ ಆರೋಗ್ಯ ಕೇಂದ್ರದ 108 ಆಂಬುಲೆನ್ಸ್‍ಗಳಲ್ಲಿ ಮಹಿಳೆಯನ್ನು ಪರಿಯಾರ್‍ಗೆ ಕರೆದೊಯ್ಯಲಾಗಿತ್ತು. ಪರಿಯಾರಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮಾತನಾಡಿ 38 ವರ್ಷದ ಯುವತಿ ಮತ್ತು ನವಜಾತ ಶಿಶು ಆರೋಗ್ಯವಂತರಾಗಿದ್ದಾರೆ. ಮತ್ತು ಇಬ್ಬರಿಗೂ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಹೇಳಿದರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಆಂಬುಲೆನ್ಸ್ ಸಿಬ್ಬಂದಿಯನ್ನು ಮಾಡಿದ ಹೆಮ್ಮೆಯ ಸೇವೆಗಾಗಿ ಶ್ಲಾಘಿಸಿರುವರು.