ಕೊಚ್ಚಿ: ಮಕ್ಕಳನ್ನು ಬಳಸಿ ತನ್ನ ದೇಹದ ಮೇಲೆ ಚಿತ್ರಗಳನ್ನು ಬರೆಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಸಾಮಾಜಿಕ ಕಾರ್ಯಕರ್ತೆ ರಹನಾ ಫಾತಿಮಾ ಪೆÇಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಎರ್ನಾಕುಳಂ ದಕ್ಷಿಣ ಪೆÇಲೀಸ್ ಠಾಣೆಯಲ್ಲಿ ಸಿಐ ಅನೀಶ್ ಅವರ ಮುಂದೆ ಶನಿವಾರ ಶರಣಾಳು.
ರಹನಾ ಫಾತಿಮಾಳ ದೇಹದ ಮೇಲೆ ತನ್ನ ಅಪ್ರಾಪ್ತ ಪುತ್ರನ ಸಹಿತ ಮಕ್ಕಳನ್ನು ಬಳಸಿ ಚಿತ್ರಬರೆಸಿ ಈ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಳು. ಘಟನೆಯ ಬಳಿಕ ಪ್ರಕರಣವನ್ನು ಪೆÇೀಕ್ಸೊ ಮತ್ತು ಐಟಿ ಕಾನೂನುಗಳ ಅಡಿಯಲ್ಲಿ ದಾಖಲಿಸಲಾಗಿತ್ತು.
ರಾಜ್ಯ ಸೈಬರ್ ಸೆಲ್ ಪ್ರಕಾರ, ಎರ್ನಾಕುಳಂ ದಕ್ಷಿಣ ಪೆÇಲೀಸರು ಮಕ್ಕಳ ಚಿತ್ರಗಳನ್ನು ಚಿತ್ರಿಸುವ ದೃಶ್ಯಗಳನ್ನು ಯೂಟ್ಯೂಬ್‍ನಲ್ಲಿ ಪೆÇೀಸ್ಟ್ ಮಾಡಿದ ಪ್ರಕರಣ ದಾಖಲಿಸಿದ್ದಾರೆ. ಜಾಮೀನು ರಹಿತ ವಿಭಾಗದ ಅಡಿಯಲ್ಲಿ ಪೆÇಲೀಸರು ಪ್ರಕರಣ ದಾಖಲಿಸಿದ ಕಾರಣ ರಹನಾ ಫಾತಿಮ ತಲೆಮರೆಸಿಕೊಂಡಿದ್ದಳು.
ರಾಹ್ನಾ ಫಾತಿಮಾಳು ಜಾಮೀನು ಕೋರಿ ಸುಪ್ರೀಂ ಕೋರ್ಟ್ ನ್ನು ಸಂಪರ್ಕಿಸಿದ್ದಳು. ಆದರೆ ನ್ಯಾಯಾಲಯವು ಆಕೆಯ ಕೃತ್ಯವನ್ನು ಕಠಿಣವಾಗಿ ಟೀಕಿಸಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಇಂತಹ ಪ್ರಕರಣದೊಂದಿಗೆ ಸುಪ್ರೀಂ ಕೋರ್ಟ್ ಅನ್ನು ಏಕೆ ಸಂಪರ್ಕಿಸಿದ್ದೀರಿ ಎಂದು ಕೇಳಿದ್ದರು. ಇದು ಆಘಾತಕಾರಿ ಪ್ರಕರಣ. ಈ ಪ್ರಕರಣವು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಈ ಪ್ರಕರಣದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಂಕುಚಿತ ಮನಸ್ಸಿನ ಜನರಲ್ಲಿ ಲೈಂಗಿಕತೆಯ ಬಗ್ಗೆ ಅಪಪ್ರಚಾರ ಮಾಡಲು ರಹನಾ ಫಾತಿಮಾ ಪ್ರಯತ್ನಿಸುತ್ತಿದ್ದಾರೆ ಎಂಬ ವಕೀಲರ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು.
ಈ ಮಧ್ಯೆ ಶನಿವಾರ ಸಂಜೆ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವುದಾಗಿ ರಹನಾ ಫಾತಿಮಾ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಸ್ಪಷ್ಟಪಡಿಸಿದ್ದಳು. "ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವೆನು. ಸಾಮಾಜಿಕ ಬದಲಾವಣೆ, ಲಿಂಗ ಸಮಾನತೆ ಮತ್ತು ಸ್ತ್ರೀ ದೇಹದ ಅತಿಯಾದ ಲೈಂಗಿಕತೆಯ ವಿರುದ್ಧದ ಹೋರಾಟವನ್ನು ಬೆಂಬಲಿಸಿದ ಎಲ್ಲರಿಗೂ ವಂದನೆಗಳು. ನನ್ನ ಇಂತಹ ಹೋರಾಟ ಸರಿ ಎಂಬುದು ಸಮಯ ಸಾಬೀತುಪಡಿಸಬಹುದು" ಎಂದು ರಹನಾ ಫಾತಿಮಾ ಫೇಸ್‍ಬುಕ್‍ನಲ್ಲಿ ಬರೆದಿದ್ದಳು.