ಕಾಸರಗೋಡು: ಸಿಪಿಎಂ ಹಾಗೂ ಮುಸ್ಲಿಂ ಲೀಗ್ ಅಪವಿತ್ರ ಮೈತ್ರಿ (ಒಳ ಒಪ್ಪಂದ) ಮಾಡಿಕೊಂಡು ಎಡ-ಬಲ ರಂಗಗಳ ಬೆಂಬಲಿಗರಾದ ಅಧಿಕಾರಿಗಳ ಸಹಾಯದೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಮತದಾರ ಪಟ್ಟಿಯನ್ನು ಬುಡಮೇಲು ಮಾಡಲು ವ್ಯವಸ್ಥಿತ ಸಂಚು ನಡೆಸುತ್ತಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ನಡೆದ ಜಿಲ್ಲಾ ಸಮಿತಿಯ ಸಭೆ ಆರೋಪಿಸಿದೆ.
ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸಿದ ನೂರಾರು ಮಂದಿ ಬಿಜಿಪಿ ಬೆಂಬಲಿಗರ ಹೆಸರನ್ನು ಮತದಾರ ಪಟ್ಟಿಯಲ್ಲಿ ಮನಪೂರ್ವಕ ಸೇರಿಸದೆ ವಂಚಿಸಿದೆ. ಬಿಜಿಪಿ ಬೆಂಬಲಿಗಾರ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಒಳಸಂಚು ನಡೆಯುತಿದೆ ಎಂದು ಬಿಜೆಪಿ ಆರೋಪಿಸಿದೆ. ಸಿಪಿಎಂ ಹಾಗೂ ಮುಸ್ಲಿಂ ಲೀಗ್ ನೀಡಿದ ಪಟ್ಟಿ ಪ್ರಕಾರ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದುಹಾಕಲು ಎಡ ಹಾಗೂ ಬಲ ರಂಗದ ಬೆಂಬಲಿಗ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರಕಾರ ಮತ್ತು ಎಡ-ಬಲ ರಂಗಗಳ ಉದ್ಯೋಗಸ್ಥ ಸಂಘಟನೆಗಳ ಬೆಂಬಲದೊಂದಿಗೆ ಬಿಜೆಪಿ ಮತದಾರರನ್ನು ಕಾನೂನುಬಾಹಿರವಾಗಿ ಹೊರಹಾಕಲು ಸಂಚು ನಡೆದಿದೆ. ಮತದಾರ ಪಟ್ಟಿಯಲ್ಲಿ ವ್ಯಾಪಕ ಅಕ್ರಮ ಹಾಗೂ ಅವ್ಯವಹಾರ ನಡೆಸಲು ಪ್ರಯತ್ನಗಳು ನಡೆಸುತ್ತಿದ್ದಾರೆ ಎಂದು ಜಿಲ್ಲಾ ನೇತಾರರ ಸಭೆ ಟೀಕಿಸಿದೆ. ರಾಜಕೀಯ ನೋಡಿ ಉದ್ಯೋಗಿಗಳಿಗೆ ಚುನಾವಣಾ ಜವಾಬ್ದಾರಿ ಕೊಡುತ್ತಿದ್ದಾರೆ. ಪ್ರಾಮಾಣಿಕ, ನಿಸ್ಪಕ್ಷ ಹಾಗೂ ನಿಷ್ಠಾವಂತ ಉದ್ಯೋಗಸ್ಥರನ್ನು ಯಾವುದೇ ಕಾರಣವಿಲ್ಲದೆ ಅನಧಿಕೃತವಾಗಿ ವರ್ಗಾವಣೆ ಉನತ್ತ ಮಟ್ಟದಲ್ಲಿ ಯತ್ನ ಆರಂಭವಾಗಿದೆ. ಚುನಾವಣಾ ಪ್ರಾಥಮಿಕ ತಯಾರಿಯ ಹಂತದಲ್ಲಿ ಪಟ್ಟಿ ಚುನಾವಣೆಯನ್ನು ಬುಡಮೇಲುಗೊಳಿಸುವ ಶ್ರಮ ಇದಾಗಿದೆ ಎಂದು ಬಿಜಿಪಿ ಆರೋಪಿಸಿದೆ.
ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ನೀಡಿಯ ಅರ್ಜಿಗಳನ್ನು ತೀರ್ಮಾನಿಸುವಲ್ಲಿ ರಾಜಕೀಯ ಪಕ್ಷಪಾತ ತರಲಾಗಿದೆ. ಕೃತ್ಯ ನಡೆದಿದೆ ಎಂದು ಬಿಜೆಪಿ ಆಪಾದಿಸಿದೆ. ನೂರಾರು ಅರ್ಜಿಗಳನ್ನು ರಾಜಕೀಯ ನೋಡಿ ಅನಧಿಕೃತವಾಗಿ ನಿರಕಾರಿಸಲಾಗಿದೆ ಮತ್ತು ಅನರ್ಹರನ್ನು ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಬಗ್ಗೆ ನಡೆದಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ನಿಸ್ಪಕ್ಷ ತನಿಖೆ
ನಡೆಸಬೇಕೆಂದು ಬಿಜಿಪಿ ಒತ್ತಾಯಿಸಿದೆ. ರಾಜ್ಯ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ..
ವಿಡಿಯೋ ಕಾನ್ಪರೆನ್ಸ್ ಮೂಲಕ ನಿನ್ನೆ ನಡೆದ ಬಿಜೆಪಿ ಕಾಸರಗೋಡು ಜಿಲ್ಲಾ ನೇತಾರರ ಸಭೆಯ ಅಧ್ಯಕ್ಷತೆಯನ್ನು ಬಿಜಿಪಿ ಜಿಲ್ಲಾಧ್ಯಕ್ಷರು ನ್ಯಾಯವಾದಿ. ಕೆ.ಶ್ರೀಕಾಂತ್ ವಹಿಸಿದ್ದರು. ಬಿಜೆಪಿ ನಾಯಕರಾದ ಪ್ರಮೀಳ. ಸಿ. ನಾಯ್ಕ್ , ಎಂ ಸಂಜೀವ್ ಶೆಟ್ಟಿ, ಪಿ.ಸುರೇಶ್ ಕುಮಾರ್ ಶೆಟ್ಟಿ, ನ್ಯಾಯವಾದಿ.ವಿ.ಬಾಲಕೃಷ್ಣ ಶೆಟ್ಟಿ, ಪಿ.ರಮೇಶ್ ಮೊದಲಾದವರು ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ವೇಲಾಯುಧನ್ ಸ್ವಾಗತತಿಸಿ, ಎಂ.ಸುಧಾಮ ಗೋಸಾಡ ವಂದಿಸಿದರು.