ಕೊರೊನಾ ಸೋಂಕಿನ ಪರಿಣಾಮ ಅಥವಾ ಅದರ ತೀವ್ರತೆ ನಾಲ್ಕು ಅಥವಾ ಐದು ದಿನಗಳವರೆಗೆ ಇರಬಹುದು ಎಂದು ಹೇಳಲಾಗಿತ್ತು. ಆದರೆ ಹೊಸ ವರದಿ ಪ್ರಕಾರ ಎಂಟು ದಿನಗಳ ಕಾಲ ವೈರಸ್ ತೀವ್ರವಾಗಿರಲಿದೆ.
ಜರ್ನಲ್ ಸೈನ್ಸ್ ಅಡ್ವಾನ್ಸಸ್‌ನಲ್ಲಿ ಈ ಕುರಿತು ವಿವರಣೆ ನೀಡಲಾಗಿದೆ. ಕೊರೊನಾ ಸೋಂಕಿನ ಹುಟ್ಟು ಚೀನಾದ ವುಹಾನ್ ನಗರದಲ್ಲಿ ಆಗಿತ್ತು. ವುಹಾನ್‌ನಿಂದ ಬೇರೆ ದೇಶಗಳಿಗೆ ಹಬ್ಬುವ ಸಂದರ್ಭದಲ್ಲಿ ಪೂರ್ವ ರೋಗ ಲಕ್ಷಣಗಳನ್ನು ಗುರುತಿಸಲಾಗಿದೆ. ವ್ಯಕ್ತಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುವವರೆಗೂ ಅದರ ಕುರಿತು ತೀವ್ರ ನಿಗಾ ಇಡಲಾಗಿತ್ತು.
ವಿಜ್ಞಾನಿಗಳ ಮಾಹಿತಿ ಪ್ರಕಾರ ಸಾಕಷ್ಟು ಮಂದಿಗೆ ರೋಗದ ಲಕ್ಷಣಗಳು ಗೋಚರಿಸಿದ ಬಳಿಕ 7.75 ದಿನದವರೆಗೆ ಸೋಂಕು ಇರುತ್ತದೆ, ಶೇ.10 ರಷ್ಟು ಮಂದಿಗೆ 14 ದಿನಗಳ ಕಾಲ ಸೋಂಕು ಇರಲಿದೆ.
ಹೀಗಾಗಿ 14 ದಿನ ಗೃಹ ಕ್ವಾರಂಟ್ಯೆನ್ ನಲ್ಲಿ ಇರಲು ತಿಳಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ರೀತಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ವುಹಾನ್‌ನಲ್ಲಿ 1084 ಮಂದಿ ರೋಗಿಯನ್ನು ಆಧರಿಸಿ ವರದಿ ತಯಾರಿಸಲಾಗಿದೆ.