ಕೋಝಿಕ್ಕೋಡ್: ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ನ್ನು ತಜ್ಞರ ಪರೀಕ್ಷೆಗಾಗಿ ನವದೆಹಲಿಗೆ ಕಳಿಸಲಾಗಿದೆ. ಅಪಘಾತದ ನಿಖರವಾದ ಕಾರಣವನ್ನು ತಿಳಿಯಲು ಬ್ಲ್ಯಾಕ್ ಬಾಕ್ಸ್‍ನ್ನು ತಜ್ಞರ ಪರೀಕ್ಷೆಗಾಗಿ ಡಿಜಿಸಿಎ ಅಧಿಕಾರಿಗಳು ದೆಹಲಿಗೆ ರವಾನಿಸಲದ್ದಾರೆ.
ಬ್ಲ್ಯಾಕ್ ಬಾಕ್ಸ್ ನಲ್ಲಿ ದಾಖಲಾದ ಮಾಹಿತಿಯನ್ನು ಶೀಘ್ರದಲ್ಲೇ ಪಡೆಯಲಾಗುವುದು ಎಂದು ಡಿಜಿಸಿಎ ತಿಳಿಸಿದೆ. ಜೊತೆಗೆ ವಿಮಾನ ತಯಾರಕರಾದ ಬೋಯಿಂಗ್‍ಗೆ ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಯಾಂತ್ರಿಕ ದೋಷಗಳ ಬಗೆಗೂ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿಜಿಸಿಎ ಮಹಾನಿರ್ದೇಶಕ ಅತುಣ್ ಕುಮಾರ್ ಹೇಳಿದ್ದಾರೆ. ಇದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ, ಡಿಜಿಸಿಎ ಅಪಘಾತದ ಬಗ್ಗೆ ತನಿಖೆ ನಡೆಸಲು ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಆಹ್ವಾನಿಸಿದೆ.
ಈಮಧ್ಯೆ, ವಿಮಾನ ನಿಲ್ದಾಣದಲ್ಲಿನ ರಚನಾತ್ಮಕ ನ್ಯೂನತೆಗಳು ಮತ್ತು ಮಾನವ ದೋಷ (ಪೈಲಟ್‍ಗಳು ಅಥವಾ ನಿಯಂತ್ರಣದ ಉಸ್ತುವಾರಿ ಹೊಂದಿರುವ ಇತರ ಅಧಿಕಾರಿಗಳು) ಕರಿಪುರ ವಿಮಾನ ಅಪಘಾತಕ್ಕೆ ಕಾರಣವಾಗಬಹುದು ಎಂದು ಡಿಜಿಸಿಎ ಮಾಜಿ ಮಹಾನಿರ್ದೇಶಕ ಭರತ್ ಭೂಷಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಿಂದಿನ ಸರ್ಕಾರಗಳು ವಿಮಾನ ನಿಲ್ದಾಣದ ರನ್ ವೇ ಅಭಿವೃದ್ಧಿಪಡಿಸಲು ಸಾಕಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧರಿರಲಿಲ್ಲ. ವಿಮಾನವು ರನ್ ವೇ ಮಧ್ಯದಲ್ಲಿ ಅಪಘಾತಕ್ಕೀಡಾಗಿದೆ ಮತ್ತು ಪೈಲಟ್ ಹಾಗೂ ಇತರರು ಅಪಘಾತದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಬೇಕು ಎಂದು ಭಾರತ್ ಭೂಷಣ್ ಹೇಳಿದರು. ಹವಾಮಾನವು ಕೆಟ್ಟದಾಗಿದ್ದರೆ ವಿಮಾನವನ್ನು ಕಣ್ಣೂರು ಅಥವಾ ಕೊಚ್ಚಿಗೆ ಏಕೆ ತಿರುಗಿಸಲಿಲ್ಲ ಎಂದು ಅವರು ಕೇಳಿದರು.
10,000 ಗಂಟೆಗಳಿಗಿಂತ ಹೆಚ್ಚು ಕಾಲ ಹಾರಾಟ ನಡೆಸಿದ ಪೈಲಟ್‍ನ ಅನುಭವದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಭಾರತ್ ಭೂಷಣ್ ಹೇಳಿದರು. ಅವರು ಟೆಸ್ಟ್ ಪೈಲಟ್ ಕೂಡ ಆಗಿದ್ದರು. ಆದರೆ ಕೋವಿಡ್ 19 ರ ಕಾರಣದಿಂದಾಗಿ ವಿಮಾನಗಳು ಹಾರಾಟ ನಡೆಸುತ್ತಿವೆ.