ಕೊಚ್ಚಿ: ಕೋವಿಡ್ ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ಮೃತಪಟ್ಟ ವೈದ್ಯರ ಹೆಸರಿನಲ್ಲಿ ಹರಡಿದ ಸಂದೇಶ ಸುಳ್ಳು ಎಂದು ಯುನೈಟೆಡ್ ನರ್ಸಸ್ ಅಸೋಸಿಯೇಷನ್ ಹೇಳಿದೆ. ಡಾ. ಆಯಿಷಾ ಎಂಬವರು ಕೋವಿಡ್ ನೊಂದಿಗೆ ಹೋರಾಡಿ ಸಾವನ್ನಪ್ಪಿದ್ದಾರೆ ಮತ್ತು ಇದು ಅವರ ಕೊನೆಯ ಮಾತುಗಳು ಎಂಬ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿತ್ತು. ವೈದ್ಯರ ಸಂಘಟನೆಯಾದ ಐಎಂಎ ಪ್ರತಿನಿಧಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ಪೆÇೀಸ್ಟ್ ಫೇಸ್‍ಬುಕ್‍ನಲ್ಲಿ ವೈರಲ್ ಆಗಿದೆ.
ಆಯಿಷಾ ಎಂಬ ವೈದ್ಯರಿಲ್ಲ ಮತ್ತು ಪ್ರಸಾರವಾಗುತ್ತಿರುವುದು 2017 ರ ಚಿತ್ರ ಎಂದು ಸೋಷಿಯಲ್ ಮೀಡಿಯಾ ಬಹಿರಂಗಪಡಿಸಿದೆ. ಭಾರತೀಯ ವೈದ್ಯಕೀಯ ಸಂಘದ ಪ್ರತಿನಿಧಿಯಾದ ಜುಲ್ಫಿ ನೂಹ್ ಅವರು ತಪ್ಪು ಸಂದೇಶವನ್ನು ಹರಡಿದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಚಿಕಿತ್ಸೆಯಲ್ಲಿದ್ದ ಡಾ. ಆಯಿಷಾ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ವಂಚನೆಯಾಗಿದೆ ಎಂದು ಬಳಿಕ ತಿಳಿದುಬಂದಿದೆ. ಸುಳ್ಳ ಸಂದೇಶಕ್ಕಾಗಿ ಮೊದಲಿಗೆ ವಿಷಾದಿಸುತ್ತೇನೆ ಎಂದು ಜುಲ್ಫಿ ನೋವಾ ಸ್ಪಷ್ಟಪಡಿಸಿದ್ದಾರೆ.
ಯುನೈಟೆಡ್ ದಾದಿಯರ ಸಂಘದ ಪ್ರತಿನಿಧಿ ಜಾಸ್ಮಿನ್ಶಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಇಂದು ಹೆಚ್ಚು ಜನರು ಸಾಮಾಜಿಲ ಜಾಲತಾಣಗಳ ಮೂಲಕ ಡಾ. ಆಯಿಷಾ ಅವರ ನಿಧನ ವಾರ್ತೆಯನ್ನುವೀಕ್ಷಿಸಿದ್ದಾರೆ. ಯಾವ ಆಯಿಷಾ? ಅವರು ಎಲ್ಲಿಯವರು ಮತ್ತು ಯಾವ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂಬ ಪ್ರಶ್ನೆಯ ಹೊರತಾಗಿಯೂ ಈ ಸುದ್ದಿ ವ್ಯಾಪಕವಾಗಿ ಪ್ರಸಾರವಾಗಿದೆ.
ತನ್ನ ಕೊನೆಯ ಕ್ಷಣದ ಬಗ್ಗೆ ಆಯಿಷಾ ಎಂಬಾಕೆ ರಚಿಸಿದ ಟ್ವಿಟ್ಟರ್ ಪೆÇೀಸ್ಟ್ ಈಗ ವೈರಲ್ ಆಗುತ್ತಿದೆ.ಟ್ವಿಟರ್ ಖಾತೆಯನ್ನು ಹುಡುಕಿದಾಗ, ಖಾತೆಯನ್ನು ಅಳಿಸಲಾಗಿದೆ ಎಂದು ಕಂಡುಬಂದಿದೆ. ಸವಿನಾ ಡೆಂಟಲ್ ಆಸ್ಪತ್ರೆಯ ಜಾಲತಾಣದಲ್ಲಿರುವ ಚಿತ್ರವನ್ನು ಆಸ್ಪತ್ರೆಯ ಚಿತ್ರವಾಗಿಯೂ ಪ್ರಸಾರ ಮಾಡಲಾಗುತ್ತಿದೆ. ಯಾವುದೇ ಮೂಲವಿಲ್ಲದ ಇಂತಹ ಸುದ್ದಿಗಳು ಎಷ್ಟು ಬೇಗನೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯುತ್ತವೆ ಎಂದು ಒಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಾನವರು ಅಷ್ಟು ದುರ್ಬಲರಾಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.