ತಿರುವನಂತಪುರ: ಕೇರಳದ ಏಳು ಜಿಲ್ಲೆಗಳು ಪ್ರವಾಹ ಪೀಡಿತವಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಆಯೋಗ ವರದಿ ಮಾಡಿದೆ. ಕೇಂದ್ರದ ಪ್ರಕಾರ, ವಯನಾಡ್, ಇಡುಕ್ಕಿ, ಪತ್ತನಂತಿಟ್ಟು, ಪಾಲಕ್ಕಾಡ್, ಕೋಝಿಕ್ಕೋಡ್, ಕೊಟ್ಟಾಯಂ ಮತ್ತು ತ್ರಿಶೂರ್ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಪೆರಿಯಾರ್, ಭರತಪುಳ, ಪಂಪಾ, ಕಬಿನಿ, ವಾಲಪಟ್ಟಣಂ ಮತ್ತು ಕುಟ್ಟಿಯಡಿ ನದಿಗಳ ತೀರದಲ್ಲಿರುವವರು ಜಾಗರೂಕರಾಗಿರಬೇಕು ಎಂದು ಆಯೋಗ ತುರ್ತು ನಿರ್ದೇಶನ ನೀಡಿದೆ.
ಆದರೆ, ಕೇರಳ ಹವಾಮಾನ ಇಲಾಖೆ ಭಾನುವಾರ ಮತ್ತು ಸೋಮವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮಂಗಳವಾರದಿಂದ ಮಳೆ ಕುಂಠಿತಗೊಳ್ಳಲಿದೆ ಎಂದು ತಿಳಿಸಿದೆ. ಆದಾಗ್ಯೂ, ಗಾಳಿಯ ತೀವ್ರತೆಗೆ ಅನುಗುಣವಾಗಿ ಇದು ಬದಲಾಗಬಹುದು. ಆದ್ದರಿಂದ ಬುಧವಾರದ ನಂತರವೂ ಕೇರಳಕ್ಕೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೂನ್ನಾರ್ ದುರಂತದಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ. ಭೂಕುಸಿತದಲ್ಲಿ ಕಾಣೆಯಾದವರ ಹುಡುಕಾಟ ಮೂರನೇ ದಿನವಾದ ಭಾನುವಾರವೂ ಬೆಳಿಗ್ಗಿನಿಂದ ಮುಂದುವರಿದ ಹುಡುಕಾಟದಲ್ಲಿ ಆರು ತಿಂಗಳ ಮಗುವಿನ ಮೃತದೇಹ ಸೇರಿದಂತೆ 17 ಶವಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ಪಡೆ, ಅಗ್ನಿಶಾಮಕ ದಳ, ಪೆÇಲೀಸ್, ಕಂದಾಯ ಮತ್ತು ಅರಣ್ಯ ಇಲಾಖೆಗಳು ಮುನ್ನಡೆಸುತ್ತಿವೆ.
(ಚಿತ್ರ ಮಾಹಿತಿ: ಆಲಪ್ಪುಳದಲ್ಲಿ ತೀವ್ರ ಪ್ರವಾಹ ಪೀಡಿತ ವಲಯವೊಂದರಲ್ಲಿ ಭಾನುವಾರ ಕಂಡುಬಂದ ಕರುಣಾಜನಕ ಶ್ವಾನದ ಚಿತ್ರ.)
ಚಿತ್ರ ಸಮರಸಕ್ಕಾಗಿ ರಾಮನ್ ಕುಟ್ಟಿ ನೆಡುವಂಗಾಡಿ