HEALTH TIPS

ಏನಿದು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್? ಇದರ ಪ್ರಯೋಜನಗಳೇನು?

 ಪ್ರಧಾನಿ ನರೇಂದ್ರ ಮೋದಿ ಅವರು 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶನಿವಾರ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಗೆ ಚಾಲನೆ ನೀಡಿದ್ದಾರೆ. 2018ರ ನೀತಿ ಆಯೋಗದ ಪ್ರಸ್ತಾವದಂತೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿನ ಪ್ರತಿಯೊಬ್ಬ ಬಳಕೆದಾರನನ್ನೂ ವಿಶಿಷ್ಟವಾಗಿ ಗುರುತಿಸಲು ಅನುಕೂಲವಾಗುವಂತೆ ಕೇಂದ್ರೀಕೃತ ವ್ಯವಸ್ಥೆ ತರುವ ಸಲುವಾಗಿ ಪ್ರತಿ ಭಾರತೀಯನಿಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡುವ ಯೋಜನೆಯನ್ನು ಮೋದಿ ಪ್ರಕಟಿಸಿದ್ದಾರೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (ಎನ್‌ಡಿಎಚ್‌ಎಂ) ಒಂದು ಸಂಪೂರ್ಣ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಾಗಿದ್ದು, ಇದರ ಅಡಿ ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ ನೀಡಲಾಗುತ್ತದೆ. ದೇಶದಾದ್ಯಂತ ಆರೋಗ್ಯ ದಾಖಲೆಗಳು, ವೈದ್ಯರು ಮತ್ತು ಆರೋಗ್ಯ ಸೇವೆಗಳ ನೋಂದಣಿ ಡಿಜಿಟಲೀಕರಣ ಮಾಡಲಾಗುತ್ತದೆ.


ನಾಲ್ಕು ಪ್ರಮುಖ ಅಂಶಗಳು :
* ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ ಅನ್ನು ನಾಲ್ಕು ಪ್ರಮುಖ ಅಂಶಗಳೊಂದಿಗೆ ಆರಂಭಿಸಲಾಗುತ್ತದೆ- ಆರೋಗ್ಯ ಐಡಿ, ವೈಯಕ್ತಿಕ ಆರೋಗ್ಯ ದಾಖಲೆಗಳು, ಡಿಜಿ ಡಾಕ್ಟರ್ ಮತ್ತು ಆರೋಗ್ಯ ಸವಲತ್ತುಗಳ ರಿಜಿಸ್ಟ್ರಿ. * ಈ ಐಡಿ ಎಲ್ಲ ರಾಜ್ಯಗಳು, ಆಸ್ಪತ್ರೆಗಳು, ಡಯಾಗ್ನೊಸ್ಟಿಕ್ ಲ್ಯಾಬೊರೇಟರಿಗಳು ಮತ್ತು ಫಾರ್ಮಸಿಗಳಲ್ಲಿ ಅನ್ವಯವಾಗುತ್ತದೆ.

ಐಡಿ ಬಳಕೆ ಸ್ವ ಇಚ್ಛೆಗೆ ಬಿಟ್ಟಿದ್ದು :
 * ನಂತರದ ದಿನಗಳಲ್ಲಿ ಇದು ಇ-ಫಾರ್ಮಸಿ ಮತ್ತು ಟೆಲಿಮೆಡಿಸಿನ್ ಸೇವೆಗಳನ್ನೂ ಒಳಗೊಳ್ಳಲಿದೆ. ನಿಯಂತ್ರಣ ಮಾರ್ಗದರ್ಶಿಗಳನ್ನು ಇದಕ್ಕೆ ಸಿದ್ಧಪಡಿಸಲಾಗುತ್ತಿದೆ. * ಈ ಪ್ಲಾಟ್‌ಫಾರ್ಮ್ ಸ್ವ ಇಚ್ಛೆಗೆ ಅನುಗುಣವಾಗಿರುತ್ತದೆ. ಈ ಆಪ್‌ನಲ್ಲಿ ಹೆಸರು ದಾಖಲಿಸಿಕೊಳ್ಳುವುದು ಬಿಡುವುದು ಅಯಾ ವ್ಯಕ್ತಿಗೆ ಬಿಟ್ಟಿದ್ದು. * ವ್ಯಕ್ತಿಯಿಂದ ಅಧಿಕೃತ ಅನುಮೋದನೆ ಪಡೆದುಕೊಂಡ ಬಳಿಕವಷ್ಟೇ ಆರೋಗ್ಯ ದಾಖಲೆಗಳನ್ನು ಹಂಚಲಾಗುತ್ತದೆ. ಅದೇ ರೀತಿ, ಆಪ್‌ಗೆ ವಿವರಗಳನ್ನು ಒದಗಿಸುವುದು ಆಸ್ಪತ್ರೆ ಮತ್ತು ವೈದ್ಯರಿಗೆ ಬಿಟ್ಟಿದ್ದು
ವೈದ್ಯರ ನೋಂದಣಿಗೆ ಅವಕಾಶ * ಡಿಜಿ ಡಾಕ್ಟರ್ ಆಯ್ಕೆಯು ದೇಶದೆಲ್ಲೆಡೆಯ ವೈದ್ಯರು ನೋಂದಾಯಿಸಿಕೊಂಡು ತಮ್ಮ ವಿವರಗಳನ್ನು ಹಾಕಲು ಅವಕಾಶ ನೀಡುತ್ತದೆ. ಇದರಲ್ಲಿ ಅವರು ಬಯಸಿದ್ದಲ್ಲಿ ಸಂಪರ್ಕ ಸಂಖ್ಯೆಯನ್ನೂ ಹಾಕಿಕೊಳ್ಳಬಹುದು. * ಆಪ್‌ನ ಬಳಕೆ ಸ್ವಯಂ ಪ್ರೇರಿತವಾಗಿದ್ದು, ಕಡ್ಡಾಯವಾಗದೆ ಇದ್ದರೂ, ಪ್ರತಿಯೊಬ್ಬರೂ ಇದನ್ನು ಬಳಸುವ ಮೂಲಕ ಪ್ರಯೋಜನ ಪಡೆಯುವಂತೆ ಮಾಡುವುದು ಸರ್ಕಾರದ ಉದ್ದೇಶ.

ವೈದ್ಯರ ನೋಂದಣಿಗೆ ಅವಕಾಶ :
  * ಡಿಜಿ ಡಾಕ್ಟರ್ ಆಯ್ಕೆಯು ದೇಶದೆಲ್ಲೆಡೆಯ ವೈದ್ಯರು ನೋಂದಾಯಿಸಿಕೊಂಡು ತಮ್ಮ ವಿವರಗಳನ್ನು ಹಾಕಲು ಅವಕಾಶ ನೀಡುತ್ತದೆ. ಇದರಲ್ಲಿ ಅವರು ಬಯಸಿದ್ದಲ್ಲಿ ಸಂಪರ್ಕ ಸಂಖ್ಯೆಯನ್ನೂ ಹಾಕಿಕೊಳ್ಳಬಹುದು. * ಆಪ್‌ನ ಬಳಕೆ ಸ್ವಯಂ ಪ್ರೇರಿತವಾಗಿದ್ದು, ಕಡ್ಡಾಯವಾಗದೆ ಇದ್ದರೂ, ಪ್ರತಿಯೊಬ್ಬರೂ ಇದನ್ನು ಬಳಸುವ ಮೂಲಕ ಪ್ರಯೋಜನ ಪಡೆಯುವಂತೆ ಮಾಡುವುದು ಸರ್ಕಾರದ ಉದ್ದೇಶ.

470 ಕೋಟಿ ರೂ. ಅನುಮೋದನೆ :
 * ಆಯುಷ್ಮಾನ್ ಭಾರತದ ಅನುಷ್ಟಾನ ಸಂಸ್ಥೆ ಎನ್‌ಎಚ್‌ಎ, ಇದಕ್ಕೆ ಪ್ಲಾಟ್‌ಫಾರ್ಮ್ ಸ್ಥಾಪನೆ ಮಾಡಿದೆ. ಆಪ್ ಮತ್ತು ವೆಬ್‌ಸೈಟ್ ಎರಡೂ ಮೂಲಗಳಲ್ಲಿ ಇದು ಲಭ್ಯವಿದೆ. ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್ ಮತ್ತು ವ್ಯಕ್ತಿಯ ಮೂಲ ವಿವರಗಳನ್ನು ಬಳಸಿ ಹೆಲ್ತ್ ಐಡಿಗಳನ್ನು ತಯಾರಿಸಲಾಗುತ್ತದೆ. * ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯ 470 ಕೋಟಿ ರೂ.ಗಳ ಬಜೆಟ್‌ಗೆ ಅನುಮೋದನೆ ನೀಡಿದೆ. ಆದರೆ ಅಂತಿಮವಾಗಿ ಎನ್‌ಎಚ್‌ಎ ಪ್ರಸ್ತಾವಕ್ಕೆ 400 ಕೋಟಿ ರೂ.ಗಿಂತ ಹೆಚ್ಚು ಅನುದಾನ ಬೇಕಾಗುವುದಿಲ್ಲ ಎನ್ನಲಾಗಿದೆ..



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries