ಎರ್ನಾಕುಳಂ: ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸೈಯದ್ ಅಲವಿ ಅವರ ಜಾಮೀನು ಅರ್ಜಿಯನ್ನು ಗುರುವಾರ ನ್ಯಾಯಾಲಯ ತಿರಸ್ಕರಿಸಿದೆ. ಆರ್ಥಿಕ ಅಪರಾಧಗಳನ್ನು ಆಲಿಸುವ ಕೊಚ್ಚಿಯ ವಿಶೇಷ ನ್ಯಾಯಾಲಯವು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣದ ಮತ್ತೊಬ್ಬ ಆರೋಪಿ ಸಂಜು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮೇ 17 ಕ್ಕೆ ಮುಂದೂಡಿದೆ. ಎಲ್ಲಾ ಎಂಟು ಆರೋಪಿಗಳ ರಿಮಾಂಡ್ ಅವಧಿಯನ್ನು ಈ ತಿಂಗಳು 25 ಕ್ಕೆ ವಿಸ್ತರಿಸಲಾಗಿದೆ.
ನ್ಯಾಯಾಲಯದಲ್ಲಿ ಸ್ವಪ್ನಾ ಸುರೇಶ್ ವಿರುದ್ಧ ಕಸ್ಟಮ್ಸ್ ಗಂಭೀರ ಆರೋಪಗಳನ್ನು ಮಾಡಿದೆ. ಜಾಮೀನು ಮಂಜೂರು ಮಾಡಿದರೆ ಸ್ವಪ್ನಾ ಸುರೇಶ್ ಮತ್ತು ತಂಡ ವಿದೇಶಕ್ಕೆ ತಲೆಮರೆಸುವ ಸಾಧ್ಯತೆ ಇದೆ. ಪೆÇಲೀಸರಿಗೆ ನಿರ್ಣಾಯಕ ಪ್ರಭಾವವೂ ಇವರಿಗಿದೆ. ಪ್ರಕರಣ ಮುಂದುವರೆದಂತೆ ಬಂಧಿತ ಶಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಮುಖ್ಯ ಆರೋಪಿಗಳಿಗೆ ಜಾಮೀನು ನೀಡುವುದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.
ಚಿನ್ನದ ಕಳ್ಳಸಾಗಣೆ ಒಪ್ಪಂದದ ಹಿಂದೆ ಅಂತರರಾಷ್ಟ್ರೀಯ ದಂಧೆ ಇದೆ ಎಂದು ಈಗಾಗಲೇ ಕಸ್ಟಮ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಚಿನ್ನದ ಕಳ್ಳಸಾಗಣೆ ಹಣ ಖರ್ಚು ಮಾಡಲು ಪ್ರತ್ಯೇಕ ತಂಡವಿದೆ. ಹಣವನ್ನು ಹವಾಲಾ ಮೂಲಕ ವರ್ಗಾಯಿಸಲಾಗಿದೆ ಎಂದು ಕಸ್ಟಮ್ಸ್ ನ್ಯಾಯಾಲಯಕ್ಕೆ ತಿಳಿಸಿದೆ.
ಇದಕ್ಕೂ ಮೊದಲು ಎನ್‍ಐಎ ನ್ಯಾಯಾಲಯ ಸಪ್ನಾಗೆ ಜಾಮೀನು ನಿರಾಕರಿಸಿತ್ತು. ಸ್ವಪ್ನಾ ವಿರುದ್ಧ ಪ್ರಾಥಮಿಕ ಪ್ರಮುಖ ಸಾಕ್ಷ್ಯಾಧಾರಗಳಿವೆ ಎಂಬ ಕಾರಣಕ್ಕೆ ಎನ್ ಐ ಎ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. 2019 ರ ನವೆಂಬರ್‍ನಿಂದ ಸ್ವಪ್ನಾ ಮತ್ತವರ ತಂಡ ರಾಜತಾಂತ್ರಿಕ ಪ್ರಭಾವದ ಮೂಲಕ ಸುಮಾರು 100 ಕೋಟಿ ರೂ. ಚಿನ್ನ ಕಳ್ಳಸಾಗಾಣಿಕೆ ನಡೆಸಿದೆಯೆಂದು ಈಗಾಗಲೇ ಕಂಡುಕೊಳ್ಳಲಾಗಿದೆ.